LATEST NEWS
ಅಂಗನವಾಡಿ ಪುಟಾಣಿಗಳ ಮೇಲೆ MRPL ನ ವಿಷಕಾರಿ ಹಾರು ಬೂದಿ

ಅಂಗನವಾಡಿ ಪುಟಾಣಿಗಳ ಮೇಲೆ MRPL ನ ವಿಷಕಾರಿ ಹಾರು ಬೂದಿ
ಮಂಗಳೂರು ಅಕ್ಟೋಬರ್ 25: ಎಂಆರ್ ಪಿಎಲ್ ನ ಹಾರು ಬೂದಿ ಮತ್ತೆ ಅವಾಂತರ ಸೃಷ್ಟಿಸಿದೆ. ಎಂ ಆರ್ ಪಿ ಎಲ್ ನ ಕೋಕ್ ಘಟಕದ ಹಾರು ಬೂದಿ ಜೋಕಟ್ಟೆ ಪರಿಸರದಲ್ಲೆಲ್ಲಾ ಹರಡಿದೆ .
ಕಳೆದ ಕೆಲವು ತಿಂಗಳಿಂದ ಹಾರು ಬೂದಿಯ ಸಮಸ್ಯೆ ಇಲ್ಲದೇ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಜೋಕಟ್ಟೆ ಪರಿಸರದ ಜನರಿಗೆ ಎಂಆರ್ ಪಿಎಲ್ ಮತ್ತೆ ಶಾಕ್ ನೀಡಿದೆ. ಇಂದು ಮುಂಜಾನೆಯಿಂದ ಕೋಕ್ ಘಟಕದ ಹಾರುಬೂದಿ ಜೋಕಟ್ಟೆ ಪರಿಸರದಲ್ಲಿ ಬಿದ್ದಿದೆ.ಈ ಹಿನ್ನೆಲೆಯಲ್ಲಿ ಪರಿಸರದ ಜನರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಜೋಕಟ್ಟೆ ಪರಿಸರದ ಮನೆ ಸೇರಿದಂತೆ ಶಾಲೆಗಳ ಮೇಲೆ ಹಾರು ಬೂದಿ ಬಿದ್ದಿದ್ದು ವಿಷಕಾರಿ ಹಾರು ಬೂದಿ ಪುಟ್ಟ ಮಕ್ಕಳ ಹೊಟ್ಟೆ ಸೇರುವ ಭೀತಿ ಎದುರಾಗಿದೆ.

ಎಂ ಆರ್ ಪಿ ಎಲ್ ನ ಕೋಕ್ ಘಟಕದ ಹಾರುಬೂದಿ ಸಮಸ್ಯೆಯನ್ನು ವಿರೋಧಿಸಿ ಜೋಕಟ್ಟೆ ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನರು ಡಿವೈಎಫ್ಐ ನೇತೃತ್ವದಲ್ಲಿ ಹಲವಾರು ಹೋರಾಟಗಳು ನಡೆಸಿದ್ದರು. ಹೋರಾಟದ ಫಲವಾಗಿ ಕಳೆದ ಕೆಲವು ತಿಂಗಳಿಂದ ಹಾರುಬೂದಿ ಸಮಸ್ಯೆ ಇರಲಿಲ್ಲ. ಆದರೆ ಎಂ ಆರ್ ಪಿ ಎಲ್ ಮತ್ತೆ ತನ್ನ ಹಿಂದಿನ ಚಾಳಿಯನ್ನು ಮುಂದುವರಿಸಿದೆ. ಕೋಕ್ ಘಟಕದಿಂದ ಹಾರು ಬೂದಿ ಇಂದು ಮತ್ತೆ ಹೊರ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಡಿವೈಎಫ್ಐ ಮತ್ತೆ ಉಗ್ರ ಹೋರಾಟ ನಡೆಸುವ ಚಿಂತನೆ ನಡೆಸಿದೆ.