LATEST NEWS
ಮಳೆಯಿಂದಾದ ಹಾನಿಗೆ 50 ಕೋಟಿ ಪರಿಹಾರಕ್ಕೆ ಮುಖ್ಯಮಂತ್ರಿಗೆ ಮನವಿ – ಐವನ್ ಡಿಸೋಜಾ

ಮಳೆಯಿಂದಾದ ಹಾನಿಗೆ 50 ಕೋಟಿ ಪರಿಹಾರಕ್ಕೆ ಮುಖ್ಯಮಂತ್ರಿಗೆ ಮನವಿ – ಐವನ್ ಡಿಸೋಜಾ
ಬೆಂಗಳೂರು ಮೇ 31: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಉಂಟಾದ ಹಾನಿಗೆ 50 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸರ್ಕಾರಿ ಮುಖ್ಯ ಸಚೇತಕ ಶ್ರೀ ಐವನ್ ಡಿ’ಸೋಜಾ ಮನವಿ ಮಾಡಿದ್ದಾರೆ.
ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ಅಪಾರ ಪ್ರಮಾಣ ಹಾನಿಯುಂಟಾಗಿದ್ದು, ಸಾರ್ವಜನಿಕ ಆಸ್ತಿ-ಪಾಸ್ತಿ ಗಳ ನಷ್ಟವಾಗಿದ್ದು, ರಸ್ತೆ ಸೇರಿದಂತೆ ಹಲವಾರು ಮನೆಗಳು ಧರಗುರುಳಿದ್ದು, ಜಿಲ್ಲಾಡಳಿತ ಸುಮಾರು 20 ಕೋಟಿ ಎಂದು ಅಂದಾಜಿಸಿದ್ದರೂ, ಮುಂದೆ ಆಗಬಹುದಾದ ಅನಾಹುತ ಮತ್ತು ಹಾನಿಗೊಂಡ ಮನೆಗಳಿಗೆ ಖರ್ಚು ಆಗುವುದನ್ನು ಮಾರುಕಟ್ಟೆ ದರದಲ್ಲಿಯೇ ಪರಿಹಾರವನ್ನು ನೀಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿ ನೀಡಿ ಸರ್ಕಾರಿ ಮುಖ್ಯ ಸಚೇತಕ ಐವನ್ ಡಿ’ ಸೋಜಾ ಮನವಿಯನ್ನು ಸಲ್ಲಿಸಿ ಕನಿಷ್ಠ 50 ಕೋಟಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಎನ್‍ಡಿಆರ್‍ಎಸ್ ನಿರ್ದೇಶನದಂತೆ ನೀಡಿದ ಪರಿಹಾರ ತೀವ್ರ ಕಡಿಮೆಯಾಗಿದ್ದು, ಪ್ರಸ್ತುತ ಮಾರುಕಟ್ಟೆ ದರದಂತೆ ಪರಿಹಾರ ಒದಗಿಸುವತೆ ಮತ್ತು ಅತೀಯಾದ ಮಳೆಯಿಂದ ಉಂಟಾಗಬಹುದಾದ ಸಾಂಕ್ರಮಿಕ ರೋಗವನ್ನು ತಡೆಕಟ್ಟಲು ರಕ್ತ ಪರಿಕ್ಷಾ ಕೇಂದ್ರವನ್ನೂ, ನುರಿತ ವೈದ್ಯ ತಂಡವನ್ನು ನೇಮಿಸಬೇಕೆಂದು ಮುಖ್ಯಮಂತ್ರಿಗಳು ಕೂಡಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು ಎಂದು ಐವನ್ ಡಿ’ಸೋಜಾ ತಿಳಿಸಿದ್ದಾರೆ.