Connect with us

    FILM

    ರೇಣುಕಾ ಸ್ವಾಮಿ ಕೊಲೆ ಪ್ರಕರಣ – ದರ್ಶನ್ ನೋಡಲು ಜೈಲಿನ ಹತ್ತಿರ ಕೂಡ ಬರದ ಕುಟುಂಬ

    ಬೆಂಗಳೂರು ಜೂನ್ 17: ಕನ್ನಡ ಚಲನಚಿತ್ರ ರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮರೆದಿದ್ದ ನಟ ದರ್ಶನ ಇದೀಗ ಕೊಲೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಜೈಲಿನಲ್ಲಿ ಕಂಬಿ ಏಣಿಸುತ್ತಿದ್ದಾರೆ. ಆದರೆ ತನ್ನ ಸ್ಟಾರ್ ಡಮ್ ನಿಂದ ತನ್ನ ಸಂಸಾರವನ್ನು ಸಾಕುತ್ತಿದ್ದ ದರ್ಶನ ಅವರು ಇದೀಗ ಅನಾಥರಾಗಿದ್ದು, ಇದುವರೆಗೂ ದರ್ಶನ ನೋಡಲು ಯಾರೂ ಬರದೆ ಅಕ್ಷರಶಃ ಅನಾಥರಾಗಿದ್ದಾರೆ.


    ಈಗಾಗಲೇ ತನ್ನ ಅಭಿಮಾನಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ ಇದೀಗ ಪ್ರಕರಣದ ಕುರಿತಂತೆ ಬಾಯಿ ಬಿಡಲು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಒಂದು ನೋಡಬೇಕಾದ ವಿಷಯ ಅಂದರೆ ತನ್ನ ಪ್ಯಾಮಿಲಿಗಾಗಿ ಸಿನೆಮಾದಲ್ಲಿ ನಟಿಸಿ ದೊಡ್ಡ ಸ್ಟಾರ್ ಆಗಿರುವ ದರ್ಶನ್ ಇದೀಗ ತನ್ನ ಪ್ಯಾಮಿಲಿ ಜೊತೆ ಇಲ್ಲ. ದರ್ಶನ್ ಅವರು ಕುಟುಂಬದವರನ್ನು ತಮ್ಮಿಂದ ದೂರವೇ ಇಟ್ಟಿದ್ದರು. ಪತ್ನಿ ಜಯಲಕ್ಷ್ಮಿ ಅವರನ್ನು ದೂರ ಇಟ್ಟಿದ್ದರು. ತಾಯಿ ಮೀನಾ ತುಗೂದೀಪ ಕೂಡ ದರ್ಶನ್ ಜೊತೆ ಇಲ್ಲ. ಹೀಗಾಗಿ ಅವರ್ಯಾರೂ ದರ್ಶನ್ ಅವರನ್ನು ನೋಡಲು ಬಂದಿಲ್ಲ. ಇನ್ನು ಆಪ್ತರು ಎನಿಸಿಕೊಂಡ ಕೆಲವರು ಕೂಡ ದರ್ಶನ್​ನಿಂದ ದೂರವೇ ಇದ್ದಾರೆ. ಇನ್ನು ಕೆಲವು ಆಪ್ತರು ಜೈಲಿನಲ್ಲೇ ಇದ್ದಾರೆ. ಹೀಗಾಗಿ, ಅವರನ್ನು ನೋಡೋಕೆ ಯಾರೆಂದರೆ ಯಾರೂ ಬಂದಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply