LATEST NEWS
ಬಾಡಿಗೆ ಕಾರು ಚಾಲಕನ ಬ್ಯಾಂಕ್ ಖಾತೆಗೆ ಬಿತ್ತು 9 ಸಾವಿರ ಕೋಟಿ ಹಣ..!!
ಚೆನ್ನೈ ಸೆಪ್ಟೆಂಬರ್ 22: ತಮಿಳುನಾಡಿನ ಬಾಡಿಗೆ ಕಾರು ಚಾಲಕನೊಬ್ಬನ ಬ್ಯಾಂಕ್ ಅಕೌಂಟ್ ಗೆ ಬರೋಬ್ಬರ್ 9 ಸಾವಿರ ಕೋಟಿ ಹಣ ಡೆಪಾಸಿಟ್ ಆದ ಘಟನೆ ನಡೆದಿದ್ದು, ಕೇವಲ 105 ರೂಪಾಯಿ ಇದ್ದ ಅಕೌಂಟ್ ಗೆ 9 ಸಾವಿರ ಕೋಟಿ ಹಣ ಬಂದಿದ್ದು ನೋಡಿ ಕಾರು ಚಾಲಕ ಶಾಕ್ ಆದ ಘಟನೆ ತಮಿಳುನಾಡಿನ ಪಳನಿ ನೇಯ್ಕಾರಪಟ್ಟಿಯಲ್ಲಿ ನಡೆದಿದೆ.
ಬಾಡಿಗೆ ಕಾರು ಚಾಲಕ ರಾಜ್‌ಕುಮಾರ್ ಅವರು ಕಾರಿನಲ್ಲಿ ಮಲಗಿದ್ದಾಗ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್‌ನಿಂದ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರ ಬ್ಯಾಂಕ್ ಖಾತೆಗೆ 9000 ಕೋಟಿ ಠೇವಣಿ ಇಟ್ಟಿರುವ ದೃಢೀಕರಣ ಸಂದೇಶ ಬಂದಿದೆ.
ಮೊದಲು ಇದು ಯಾರೋ ತನ್ನೊಂದಿಗೆ ತಮಾಷೆ ಆಡುತ್ತಿದ್ದಾರೆ ಎಂದು ಭಾವಿಸಿದ ಅವರು ಬಳಿಕ ಹಣದ ಠೇವಣಿಯನ್ನು ಕ್ರಾಸ್ ಚೆಕ್ ಮಾಡಲು 21,000 ರೂ.ಗಳನ್ನು ಸ್ನೇಹಿತರಿಗೆ ಕಳುಹಿಸಿದ್ದಾರೆ. ಹಣ ಸ್ನೇಹಿತನ ಅಕೌಂಟ್ ಗೆ ಟ್ರಾನ್ಸಪರ್ ಕೂಡ ಆಗಿದೆ. ಈ ನಡುವೆ ಮರುದಿನ ಬೆಳಗ್ಗೆ ತೂತುಕುಡಿಯ ಟಿಎಂಬಿ ಅಧಿಕಾರಿಗಳು ಅವರನ್ನು ಸಂಪರ್ಕಿಸಿ ತಪ್ಪಾಗಿ ಹಣ ಜಮಾ ಆಗಿದೆ ಎಂದು ತಿಳಿಸಿದರು. ಹೆಚ್ಚಿನ ಹಣ ಹಿಂಪಡೆಯದಂತೆ ರಾಜ್‌ಕುಮಾರ್‌ಗೆ ಮನವಿ ಮಾಡಿದ ಅವರು ಖಾತೆಗೆ ತಪ್ಪಾಗಿ 9000 ಕೋಟಿ ರೂ ಡೆಪಾಸಿಟ್ ಆಗಿದ್ದು, ಹಣವನ್ನು ಖರ್ಚು ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.
ಈ ನಡುವೆ ಬ್ಯಾಂಕ್ ಆಡಳಿತ ಮಂಡಳಿಯು ರಾಜ್‌ಕುಮಾರ್‌ಗೆ ಬೆದರಿಕೆ ಹಾಕಲು ಪ್ರಾರಂಭಿಸಿತು ಎಂದು ಹೇಳಲಾಗಿದೆ. ರಾಜ್‌ಕುಮಾರ್ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದರು. ಪೊಲೀಸರ ದೂರಿನ ನಂತರ ಚೆನ್ನೈನ ತ್ಯಾಗರಾಯನಗರದಲ್ಲಿರುವ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್‌ನ ವಕೀಲರು ಮತ್ತು ಚಾಲಕ ರಾಜಕುಮಾರ್ ಕಡೆಯಿಂದ ಸಂಧಾನದಲ್ಲಿ ತೊಡಗಿದ್ದರು.9,000 ಕೋಟಿ ವ್ಯವಹಾರ ಮಾಡಿದ್ದ 21,000 ರೂ.ಗಳನ್ನು ಹಿಂದಿರುಗಿಸಿದ ರಾಜಕುಮಾರ್‌ಗೆ ಬ್ಯಾಂಕ್ ರಾಜಿ ಸಂಧಾನ ನಡೆಸಿ ವಾಹನ ಸಾಲ ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ.