Connect with us

    LATEST NEWS

    ರಜೆ ಅರ್ಧಕ್ಕೆ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ಯೋಧನ ಮಾತುಗಳು

    ರಜೆ ಅರ್ಧಕ್ಕೆ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ಯೋಧನ ಮಾತುಗಳು

    ಕೇರಳ ಫೆಬ್ರವರಿ 16: ಪುಲ್ವಾಮ ದಾಳಿ ನಂತರ ಭಾರತೀಯ ಸೇನೆ ತನ್ನ ರಜೆಯಲ್ಲಿರುವ ಎಲ್ಲಾ ಯೋಧರಿಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿದೆ. ಈ ಹಿನ್ನಲೆಯಲ್ಲಿ ಕೇರಳದ ಯೋಧನೋಬ್ಬ ಆದೇಶ ಸ್ವೀಕರಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿರುವ ಬಗ್ಗೆ ಬರೆದಿರುವ ಕೆಚ್ಚೆದೆಯ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ಕೇರಳದ ಪತ್ತನಂತಿಟ್ಟ ಜಿಲ್ಲೆಯ ಆರಂನ್ಮುಳ ನಿವಾಸಿಯಾದ ರಂಜಿತ್ ರಾಜ್ ಅವರ ಫೇಸ್‍ಬುಕ್ ಪೋಸ್ಟ್ ‍ನ ಅನುವಾದ ಇಲ್ಲಿದೆ.
    ” ರಜೆ ಮುಗಿಯುವ ಮುನ್ನವೇ ಕರೆ ಬಂದಿದೆ. ಈ ಹೊತ್ತಲ್ಲಿ ಭಯ ಅಥವಾ ದುಃಖ ಆಗುತ್ತಿಲ್ಲ, ಹೆಮ್ಮೆ ಎನಿಸುತ್ತಿದೆ. ದೇಶಕ್ಕಾಗಿ ಕಾಶ್ಮೀರದಲ್ಲಿ ಪ್ರಾಣ ತೆತ್ತ ನನ್ನ ಸಹೋದರರಿಗಾಗಿ ನಾನು ಹೋಗುತ್ತಿದ್ದೇನೆ. ಇಡೀ ದೇಶದ ಪ್ರಾರ್ಥನೆ ಜತೆಗಿರುವಾಗ ಪುಲ್ವಾಮ ದಾಳಿಗೆ ತಕ್ಕ ಉತ್ತರವನ್ನು ನೀಡುತ್ತೇವೆ.”

    ” ಯೋಧರಲ್ಲದೇ ಇರುವ ಭಾರತೀಯರು ನಾಳೆ ಅಥವಾ ಮುಂಬರುವ ದಿನಗಳಲ್ಲಿ ನಡೆಯುವ ರಾಜಕೀಯ ಕೋಲಾಹಲದಲ್ಲಿ ಈ ವಿಷಯವನ್ನು ಮರೆಯಲು ಸಾಧ್ಯವಾಗಬಹುದು. ಸುದ್ದಿ ಮಾಧ್ಯಮಗಳು ಬುದ್ದಿಜೀವಿಗಳನ್ನು ವಾಹಿನಿಯಲ್ಲಿ ಕೂರಿಸಿ ದೇಶಪ್ರೇಮದ ಮಾತನ್ನು ಬಿತ್ತರಿಸಬಹುದು.

    ಒಂದು ಬಾರಿ ನಮ್ಮ ಈ ಸಮವಸ್ತ್ರ ಧರಿಸಿ ಕಾಶ್ಮೀರದ ಹೆದ್ದಾರಿಯಲ್ಲಿ ನಡೆಯಲು ಇಲ್ಲಿನ ರಾಜಕಾರಣಿಗಳನ್ನು ನಾನು ಆಮಂತ್ರಿಸುತ್ತೇನೆ. the beauty of JOURNEY through heaven valley of India ಎಂಬುದು ನಿಮಗೆ ಆಗ ಅರ್ಥವಾಗುತ್ತದೆ. ಚರ್ಚೆ ಅಥವಾ ಸಂಧಾನಗಳನ್ನು ಮಾಡಲು ನಾವೇನೂ ರಾಜಕಾರಣಿಗಳಲ್ಲ, ನಾವು ಭಾರತೀಯ ಸೇನೆ. ಈ ದಾಳಿಗೆ 10 ಪಟ್ಟು ಉತ್ತರವನ್ನು ನಾವು ಕೊಡಲಿದ್ದೇವೆ. ನನ್ನ ಧೀರ ಸಹೋದ್ಯೋಗಿಗಳಿಗೆ ಶ್ರದ್ಧಾಂಜಲಿ ಎಂದು ಬರೆದುಕೊಂಡಿದ್ದಾರೆ.

    ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯೋಧನ ಕೆಚ್ಚೆದೆಯ ಮಾತುಗಳಿಗೆ ಸಾವಿರಾರು ಪ್ರತಿಕ್ರಿಯೆಗಳು ಬಂದಿವೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *