ಉಳ್ಳಾಲ ಪ್ರಚೋದನಕಾರಿ ಫ್ಲೆಕ್ಸ್ ಕೇಸು ದಾಖಲಿಸಿದ ಎಸ್ ಡಿ ಪಿ ಐ

ಮಂಗಳೂರು,ಫೆಬ್ರವರಿ 18: ಕೋಮು ಸೂಕ್ಷ್ಮಾ ಪ್ರದೇಶವಾದ ಉಳ್ಳಾಲದಲ್ಲಿ ಪ್ರಚೋದನಕಾರಿ ಫ್ಲೆಕ್ಸ್ ಹಾಕಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎಸ್ ಡಿಪಿಐ ಈ ದೂರನ್ನು ದಾಖಲಿಸಿದೆ.

ಉಳ್ಳಾಲದ ಹಲವು ಜನನಿಬಿಡ ಪ್ರದೇಶಗಳಲ್ಲಿ ಇತ್ತೀಚೆಗೆ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು CRPF ಯೋಧರ ಮೇಲೆ ದಾಳಿ ನಡೆಸಿ ಹತೈಗೈದ ಕೃತ್ಯಕ್ಕೆ ಸಂಬಂಧಿಸಿ ‘ವಿಶ್ವಹಿಂದೂ ಪರಿಷತ್ ಬಜರಂಗ ದಳ’ ಎಂಬ ಹೆಸರಿನಲ್ಲಿ ಉಳ್ಳಾಲ ಬೈಲ್‌ನ ಶ್ರೀ ವೈದ್ಯನಾಥ ಛತ್ರಪತಿ ಶಾಖೆಯ ವತಿಯಿಂದ ಪ್ರಚೋದನಕಾರಿ ಫ್ಲೆಕ್ಸ್ ಅಳವಡಿಸಿ ಅದರಲ್ಲಿ ಕೋಮು ದ್ವೇಷವನ್ನು ಹರಡಿಸಿ ಗಲಭೆಯನ್ನು ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ ಎಂದು ಎಸ್ ಡಿಪಿಐ ಆರೋಪಿಸಿದೆ. ‘ದೇಶದ ಯೋಧರ ಸಾವಲ್ಲೂ ಅಲ್ಪಸಂಖ್ಯಾತರ ನಗು,ಮುಸ್ಲಿಮರ ಮೇಲೆ ಐಸಿಸ್ ನಂಟು ಎಂಬ ಗೂಬೆ ಕೂರಿಸುವ ರೀತಿಯಲ್ಲಿ ಹಲವಾರು ಪ್ರಚೋದನಕಾರಿ ವಿಚಾರವನ್ನು ಬ್ಯಾನರ್ ನಲ್ಲಿ ಅಳವಡಿಸಿದ್ದು ಇದು ಹಿಂದೂ ಮುಸಲ್ಮಾನರ ನಡುವೆ ಬಿರುಕು ಉಂಟುಮಾಡುವ ಪ್ರಯತ್ನವಾಗಿದೆ.

ಆದುದರಿಂದ ಪೊಲೀಸ್ ಇಲಾಖೆ ಕೂಡಲೇ ಅಂತವರ ಮೇಲೆ ಕಾನೂನು ಕ್ರಮ ಜರಗಿಸಲು ಆಗ್ರಹಿಸಿ ಎಸ್ ಡಿ ಪಿ ಐ ಪಕ್ಷದ ಉಳ್ಳಾಲಾದ ಕಾರ್ಯಕರ್ತರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Facebook Comments

comments