LATEST NEWS
ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧದ ಹಿಂದೆ ಧಾರ್ಮಿಕ ರಾಜಕಾರಣ ಕೆಲಸ ಮಾಡುತ್ತಿದೆ -ಡಾ ಮಲ್ಲಿಕಾ ಎಸ್ ಘಂಟಿ
ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧದ ಹಿಂದೆ ಧಾರ್ಮಿಕ ರಾಜಕಾರಣ ಕೆಲಸ ಮಾಡುತ್ತಿದೆ -ಡಾ ಮಲ್ಲಿಕಾ ಎಸ್ ಘಂಟಿ
ಮಂಗಳೂರು ನವೆಂಬರ್ 16: ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧದ ಹಿಂದೆ ಧಾರ್ಮಿಕ ರಾಜಕಾರಣ ಕೆಲಸ ಮಾಡುತ್ತಿದೆ ಎಂದು ಆಳ್ವಾಸ್ ನುಡಿಸಿ 2018 ರ ಸಮ್ಮೇಳನಾಧ್ಯಕ್ಷೆ ಡಾ. ಮಲ್ಲಿಕಾ ಎಸ್ ಘಂಟಿ ಅಭಿಪ್ರಾಯಪಟ್ಟಿದ್ದಾರೆ.
ಮೂಡಬಿದ್ರೆಯಲ್ಲಿ ಆರಂಭಗೊಂಡಿರುವ ಕನ್ನಡ ನಾಡು ನುಡಿ ಸಂಸ್ಕೃತಿ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2018 ರ ಸಮ್ಮೇಳನದಲ್ಲಿ ಶಬರಿಮಲೆ ವಿಚಾರ ಸದ್ದು ಮಾಡಿದೆ. ಆಳ್ವಾಸ್ ನುಡಿಸಿರಿ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ ಡಾ ಮಲ್ಲಿಕಾ ಎಸ್ . ಘಂಟಿ ತಮ್ಮ ಸಮ್ಮೇಳನಅದ್ಯಕ್ಷೆರ ಭಾಷಣದಲ್ಲಿ ಶಮರಿಮಲೆ ವಿವಾದ ವನ್ನು ಪ್ರಸ್ತಾಪಿಸಿದ್ದಾರೆ.
ಮಹಿಳೆಯರು ಅಯ್ಯಪ್ಪಗುಡಿ ಪ್ರವೇಶಿಸುವುದನ್ನು ಜನ ಸಮುದಾಯದ ನಂಬಿಕೆ, ಭಾವನೆಗಳು ಪ್ರಬಲವಾಗಿ ವಿರೋಧಿಸುತ್ತಿವೆ ಎಂಬುದಾಗಿ ಬಿಂಬಿಸಲಾಗುತ್ತಿದೆ ಎಂದು ಕಿಡಿಕಾರಿದ ಅವರು ಇದರ ಹಿಂದೆ ಬಹುದೊಡ್ಡ ರಾಜಕಾರಣವಿದೆ.
ಯಾವುದೋ ಕಾಲದಲ್ಲಿ ಹುಟ್ಟಿಕೊಂಡ ನಂಬಿಕೆ, ಆಚಾರಗಳು ಎಲ್ಲ ಕಾಲಕ್ಕೂ ನಿಯಂತ್ರಕಗಳಾಗಿ ನಿಲ್ಲುವುದರ ಹಿಂದೆ ಬಹುದೊಡ್ಡ ‘ಧಾರ್ಮಿಕ ರಾಜಕಾರಣ ಇದ್ದೇ ಇರುತ್ತದೆ.
ಅದು ಲಿಂಗ ರಾಜಕಾರಣವೂ ಹೌದು, ‘ಧಾರ್ಮಿಕ ರಾಜಕಾರಣವೂ ಹೌದು. ಇದಕ್ಕೆ ಪ್ರಭುತ್ವದ ಸಮ್ಮತಿಯೂ ಇರುತ್ತದೆ ಎಂದು ಪರೋಕ್ಷವಾಗಿ ಬಿಜೆಪಿ ಮತ್ತು ಸಂಘ ಪರಿವಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಯ್ಯಪ್ಪಗುಡಿ ಪ್ರವೇಶ ವಿಚಾರದ ಪರಿಹಾರ ತಾಳ್ಮೆ, ಸಹನೆಯಿಂದ ಆಗಬಹುದಾದ ಕಾರ್ಯ. ಕತ್ತಿ, ಗುರಾಣಿಗಳಿಗಿಂತಲೂ ಪ್ರೀತಿ, ನಂಬಿಕೆ, ವಿಶ್ವಾಸಗಳ ಮೂಲಕ ಈ ಯುದ್ಧ ಗೆಲ್ಲುವ ಇರಾದೆ ಮನುಷ್ಯ ಘನತೆಯದ್ದಾಗಬೇಕು. ಇಲ್ಲಿ ಮತ ರಾಜಕಾರಣದ ಲೆಕ್ಕಾಚಾರ ನಡೆಯುತ್ತಿದೆ.
ಸಾರ್ವಜನಿಕ ಸ್ಥಳಗಳಾದ ದೇವಾಲಯ, ಚರ್ಚ್, ಮಸೀದಿಗಳಲ್ಲಿ ಜಾತಿ, ಲಿಂಗ ಕಾರಣಗಳಿಂದ ಪ್ರವೇಶ ನಿರಾಕರಿಸುವುದು ಪ್ರಜಾಪ್ರಭುತ್ವವನ್ನು ಗೌರವಿಸಿದಂತಲ್ಲ. ನಮ್ಮ ದೇವರುಗಳು, ಧರ್ಮಗಳು ಮುಖವಾಡ ಹಾಕಿಕೊಂಡು ಕತ್ತಿಮಸೆಯುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದರು.