ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಭೂತಾಯಿ ಮೀನಿನ ಬುಗ್ಗೆ

ಉಡುಪಿ ನವೆಂಬರ್ 16: ಉಡುಪಿಯಲ್ಲಿ ಈ ಬಾರಿ ಮೀನುಗಾರರು ಬಂಪರ್ ಲಾಟರಿ ಹೊಡೆದಿದ್ದಾರೆ. ಎಲ್ಲಿ ನೋಡಿದರೂ ಬರಿ ಮೀನಿನ ರಾಶಿಯೇ ಈ ಬಾರಿ ಉಡುಪಿ ಮೀನುಗಾರರಿಗೆ ದೊರೆಯುತ್ತಿದ್ದು, ಮೀನಿನ ಸುಗ್ಗಿಯಾಗಿದೆ.

ಕಳೆದ ಒಂದು ತಿಂಗಳಲ್ಲಿ ಅರಬ್ಬೀ ಸಮುದ್ರದ ತಟದಲ್ಲೇ ರಾಶಿ ರಾಶಿ ಮೀನುಗಳು ತಾವಾಗಿಯೇ ಬಲೆಗೆ ಸಿಲುಕ ತೊಡಗಿದೆ. ಕಾಪು ತಾಲೂಕಿನ ಮಟ್ಟು ಕಡಲ ಕಿನಾರೆಯಲ್ಲಿ ಬೂತಾಯಿ ಮೀನಿನ ಬುಗ್ಗೆ ಬಲೆಗೆ ಸಿಕ್ಕಿ ಬಲೆ ಹಾಕಿದ್ದ ಮೀನುಗಾರರಿಗೆ ಬಂಪರ್ ಮೀನು ಸಿಕ್ಕಿದೆ.
ಸಮುದ್ರ ತೀರದಲ್ಲಿ ನಾಡದೋಣಿ ಮೀನುಗಾರರ ಎರಡು ದೋಣಿಗಳು ಜೋಡು ಬಲೆ ಕಟ್ಟಿ ಮೀನುಗಾರಿಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಂಚಾರ ಹೊರಟ ಮೀನಿನ ಬುಗ್ಗೆ ನಾಡದೋಣಿಗಳ ಬಲೆಗೆ ಸಿಲುಕಿದೆ. ಇಡೀ ದೋಣಿಯ ಸುತ್ತಲೂ ರಾಶಿ ರಾಶಿ ಮೀನು ಸೆರೆ ಸಿಕ್ಕಿದ ವೀಡಿಯೋ ಲಭ್ಯವಾಗಿದೆ.

ಕಣ್ಣು ಹಾಯಿಸಿದಲ್ಲೆಲ್ಲಾ ಬಲೆಯ ವ್ಯಾಪ್ತಿಯಿಂದ ಹಾರುವ ಮೀನು ಕಾಣುತ್ತಿದ್ದು ವೀಡಿಯೋ ಬಹಳ ಕುತೂಹಲ ಹುಟ್ಟಿಸುತ್ತದೆ. ಸಮುದ್ರದ ಮಧ್ಯೆಯಲ್ಲಿ ಮೀನಿನ ಬುಗ್ಗೆ ಕಾಣಿಸೋದು ಸಾಮಾನ್ಯ, ಆದ್ರೆ ಕಡಲ ಬದಿಯಲ್ಲಿ ಇಷ್ಟು ಗಾತ್ರದಲ್ಲಿ ಮೀನು ಸಿಕ್ಕಿದ್ದು ಮೀನುಗಾರರಿಗೇ ಆಶ್ಚರ್ಯ ತಂದಿದೆ. ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

VIDEO

Facebook Comments

comments