LATEST NEWS
ಹನುಮಾನ್ ಮಂದಿರದ ಬಳಿ ಫುಡ್ ಡೆಲಿವರಿ ಮಾಡಲು ನಿರಾಕರಣೆ; ಕೆಲಸ ಕಳೆದುಕೊಂಡ ಉದ್ಯೋಗಿ!
ದೆಹಲಿ, ಮಾರ್ಚ್ 08: ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿದ ತಕ್ಷಣ ಅದು ನೀವಿದ್ದ ಜಾಗಕ್ಕೆ ಬರುತ್ತದೆ. ಆದ್ರೆ ಫುಡ್ ಆರ್ಡರ್ ಮಾಡಿದ ವ್ಯಕ್ತಿಗೆ ಡೆಲಿವರಿ ಏಜೆಂಟ್ ನಾನು ನಿಮ್ಮ ಆರ್ಡರ್ ತಂದುಕೊಡುವುದಿಲ್ಲ ಎಂದು ಹೇಳಿದ್ದಾನೆ.
ನಾನ್ ವೆಜ್ ಆರ್ಡರ್ ನ್ನು ದೇವಸ್ಥಾನದ ಬಳಿ ಇರುವ ಲೊಕೇಷನ್ ಗೆ ಕೊಂಡೊಯ್ಯಬೇಕಾಗಿದ್ದೇ ಇದಕ್ಕೆ ಕಾರಣ.ಇದೇ ಕಾರಣಕ್ಕಾಗಿ ಆತ ಕೆಲಸ ಕಳೆದುಕೊಂಡಿದ್ದಾನೆ. ದೆಹಲಿಯ ಬಾಬಾ ಹನುಮಾನ್ ಮಂದಿರ ಆವರಣದ ಬಳಿ ಮಾಂಸಾಹಾರಿ ಆಹಾರವನ್ನು ವಿತರಿಸಲು ನಿರಾಕರಿಸಿದ ಕಾರಣ ಆಹಾರ ವಿತರಣಾ ಏಜೆಂಟ್ ( ಡೆಲಿವರಿ ಬಾಯ್ ) ತನ್ನ ಕೆಲಸವನ್ನು ಕಳೆದುಕೊಂಡಿದ್ದಾನೆ.
ಸ್ವಿಗ್ಗಿಯ ಡೆಲಿವರಿ ಏಜೆಂಟ್ ದೇವಸ್ಥಾನದ ಆವರಣದ ಸಮೀಪದಲ್ಲಿರುವ ಗ್ರಾಹಕರಿಗೆ ಮಟನ್ ಕುರ್ಮಾ ಮತ್ತು ನಾನ್ ಆರ್ಡರ್ ತಲುಪಿಸಬೇಕಿತ್ತು. ಆದರೆ ಫುಡ್ ಆರ್ಡರ್ ಮಾಡಿದ್ದ ಗ್ರಾಹಕರ ಸ್ಥಳದ ಕಾರಣದಿಂದ ಮಾಂಸಾಹಾರಿ ಆಹಾರ ಪದಾರ್ಥವನ್ನು ತಲುಪಿಸಲು ನಿರಾಕರಿಸಿದರು. ಮಾರ್ಚ್ 1 ರಂದು, ಕರೋಲ್ ಬಾಗ್‌ನ ರೆಸ್ಟೋರೆಂಟ್‌ನಿಂದ ಗ್ರಾಹಕರೊಬ್ಬರು ಮಟನ್ ಕುರ್ಮಾ ಮತ್ತು ನಾನ್‌ಗೆ ಆರ್ಡರ್ ಮಾಡಿದ್ದರು. ಕಾಶ್ಮೀರ್ ಗೇಟ್‌ನಲ್ಲಿರುವ ಜಮುನಾ ಬಜಾರ್ ಹನುಮಾನ್ ಮಂದಿರದ ಬಳಿಯ ರಾಮ್ ಕಚೋರಿ ಅಂಗಡಿ ಬಳಿ ಗ್ರಾಹಕರ ಡೆಲಿವರಿ ವಿಳಾಸವಾಗಿತ್ತು.
ಆದರೆ ಆರ್ಡರ್ ಅನ್ನು ತಲುಪಿಸುವ ಕಾರ್ಯವನ್ನು ನಿರ್ವಹಿಸುವ ಡೆಲಿವರಿ ಏಜೆಂಟ್ ಆಹಾರ ತಲುಪಿಸಲು ನಿರಾಕರಿಸಿದ್ದರು. ಪ್ರತಿ ದಿನ ಹನುಮಾನ್ ದೇವರಿಗೆ ನೈವೇದ್ಯಗಳು ಅಥವಾ ಸಿಹಿತಿಂಡಿಗಳು ಮತ್ತು ಕಚೋರಿಗಳನ್ನು ತಯಾರಿಸುವ ಪ್ರದೇಶವಾಗಿರುವುದರಿಂದ ಇಲ್ಲಿಗೆ ಮಟನ್ ಐಟಂ ಅನ್ನು ತಲುಪಿಸಲು ನಿರಾಕರಿಸಿದ್ದರು.