Connect with us

    KARNATAKA

    ‘ರೀಲ್ಸ್’ ಹುಚ್ಚಿಗೆ ಲಾಂಗ್ ಮಚ್ಚು ಹಿಡಿದ್ರೆ ಜೋಕೆ, ಶಿವಮೊಗ್ಗದಲ್ಲಿ ಆರು ಮಂದಿ ಅಪ್ರಾಪ್ತರ ಮೇಲೆ ಬಿತ್ತು ಖಾಕಿ ಕೇಸ್

    ಶಿವಮೊಗ್ಗ: ರೀಲ್ಸ್ ಹುಚ್ಚಿಗೆ ಲಾಂಗು, ಮಚ್ಚು ಹಿಡಿದು ವಿಡಿಯೋ ಮಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಶಿವಮೊಗ್ಗದಲ್ಲಿ ಲಾಂಗ್ ಮಚ್ಚು ಹಿಡಿದು ರೀಲ್ಸ್ ಮಾಡಿದ ಆರು ಮಂದಿ ಅಪ್ರಾಪ್ತರ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿದ್ದಾರೆ.

    ಐವರು ಹುಡುಗರು ಸಾರ್ವಜನಿಕ ಸ್ಥಳದಲ್ಲಿ ನಿಂತು ಕೈಯಲ್ಲಿ ಲಾಂಗ್ ಮಚ್ಚು ಹಿಡಿದು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದರು. ಸಾರ್ವಜನಿಕ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡುವಂತೆ ವರ್ತಿಸಿದ ಕಾರಣ, ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಸುಮೊಟೊ ಪ್ರಕರಣ ದಾಖಲಿಸಿ ಶಾಕ್ ನೀಡಿದ್ದಾರೆ. ಆರು ಮಂದಿ ಅಪ್ರಾಪ್ತ ಯುವಕರಾಗಿದ್ದು ತುಂಗಾ ನಗರ ಪೊಲೀಸರು ಸುಮೊಟೊ‌ ಪ್ರಕರಣ ದಾಖಲು ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply