FILM
ವಿವಾಹವಾಗುವುದಾಗಿ ನಂಬಿಸಿ ಯುವತಿಗೆ ಲೈಂಗಿಕ ಕಿರುಕುಳ ಬಿಗ್ ಬಾಸ್ ಸ್ಪರ್ಧಿ ಮಾಡೆಲ್ ಶಿಯಾಸ್ ಕರೀಂ ಅರೆಸ್ಟ್

ಚೆನ್ನೈ ಅಕ್ಟೋಬರ್ 05 : ರಿಯಾಲಿಟಿ ಶೋ ತಾರೆ ಹಾಗೂ ಮಾಡೆಲ್ ಶಿಯಾಸ್ ಕರೀಂ ಅವರನ್ನು ಚೆನ್ನೈ ಪೊಲೀಸರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡಿದ್ದಾರೆ. ಶಿಯಾಸ್ ಕರೀಂ ಮೇಲೆ ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿ 11 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ.
ವಿದೇಶದಿಂದ ಬಂದಿದ್ದ ಶಿಯಾಸ್ ಕರೀಂ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತನನ್ನು ಚೆನ್ನೈ ಕಸ್ಟಮ್ಸ್ ಇಲಾಖೆ ವಶಕ್ಕೆ ಪಡೆದಿದ್ದು, ಕೇರಳ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ. ಜಿಮ್ನಾಷಿಯಂ ತರಬೇತುದಾರರಾಗಿರುವ ಯುವತಿಯ ದೂರಿನ ಮೇರೆಗೆ ಕಾಸರಗೋಡು ಚಂತೇರಾ ಪೊಲೀಸರು ಶಿಯಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಪೊಲೀಸರು ಆತನನ್ನು ಬಂಧಿಸಲು ಲುಕ್‌ಔಟ್ ನೋಟಿಸ್ ಹೊರಡಿಸಿದ್ದರು.

ಎರ್ನಾಕುಲಂನಲ್ಲಿ ತನ್ನದೇ ಆದ ಜಿಮ್ನಾಷಿಯಂ ನಡೆಸುತ್ತಿರುವ ಶಿಯಾಸ್ ಜಿಮ್ ಟ್ರೈನರ್ ಗಾಗಿ ಜಾಹೀರಾತು ನೀಡಿದ್ದರು. ಈ ಜಾಹೀರಾತಿನ ಮೂಲಕವೇ 32 ವರ್ಷದ ಜಿಮ್ನಾಷಿಯಂ ತರಬೇತುದಾರ ಆರೋಪಿಯನ್ನು ಸಂಪರ್ಕಿಸಿದ್ದ. ದೂರಿನ ಪ್ರಕಾರ ಪರಸ್ಪರ ಪರಿಚಯ ಮಾಡಿಕೊಂಡು ಶಿಯಾಸ್ ಮಹಿಳೆಗೆ ಮದುವೆಯಾಗುವುದಾಗಿ ಭರವಸೆ ನೀಡಿದ ಅತ್ಯಾಚಾರ ನಡೆಸಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ. ಯುವತಿಯ ದೂರಿನ ಮೇರೆಗೆ ಪೊಲೀಸರು ಅತ್ಯಾಚಾರ, ನಂಬಿಕೆ ದ್ರೋಹ ಮತ್ತು ಗರ್ಭಪಾತದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರುದಾರರನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಹೊಜದುರ್ಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಮುಂದೆ ಗೌಪ್ಯ ಹೇಳಿಕೆಯನ್ನೂ ನೀಡಿದ್ದಾರೆ. ಜಾಹೀರಾತು ಮಾಡೆಲ್ ಆಗಿದ್ದ ಶಿಯಾಸ್ ಕರೀಂ ಬಿಗ್ ಬಾಸ್ ಶೋ ಮೂಲಕ ಫೇಮಸ್ ಆದರು.