LATEST NEWS
ರಾಹುಲ್ ಗಾಂಧಿಯನ್ನು ಮದುವೆಯಾಗಲು ಸಿದ್ಧ: ಬಾಲಿವುಡ್ ನಟಿ
ಮುಂಬೈ, ಆಗಸ್ಟ್ 08: ನಾನು ರಾಹುಲ್ ಗಾಂಧಿಯವರನ್ನು ಮದುವೆಯಾಗಲು ಸಿದ್ಧಳಿದ್ದೇನೆ’ ಎಂದು ಬಾಲಿವುಡ್ ನಟಿ ಶೆರ್ಲಿನ್ ಛೋಪ್ರಾ ಹೇಳಿದ್ದಾರೆ.
ಅದಕ್ಕೆ ಒಂದು ಷರತ್ತನ್ನೂ ಮುಂದಿರಿಸಿದ್ದಾರೆ. ತಮ್ಮ ಕುಲನಾಮ ಛೋಪ್ರಾ ಎಂದು ಹಾಕಲು ಸಮ್ಮತಿಸಬೇಕು ಎಂದು ಹೇಳಿದ್ದಾರೆ. ಮುಂಬೈನ ಬಾಂದ್ರಾಬ್ಯಾಂಡ್ಸ್ಟಾಂಡ್ ಬೀಚ್ಗೆ ಇತ್ತೀಚಿಗೆ ಶೆರ್ಲಿನ್ ಛೋಪ್ರ ಬಂದಿದ್ದಾಗ ಪತ್ರಕರ್ತರು ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮದುವೆಯಾಗಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಸಿದ್ಧಳಿದ್ದೇನೆ ಎಂದು ಹೇಳಿದ ಅವರು, ಛೋಪ್ರಾ ಎಂಬ ಕುಲನಾಮ ಮುಂದುವರಿಯಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
You must be logged in to post a comment Login