LATEST NEWS
ಪಟ್ಟದ ದೇವರನ್ನು ಮರಳಿಸಲು ನಿರಾಕರಿಸುವುದು ದರೋಡೆಗೆ ಸಮಾನ – ಶಿರೂರು ಶ್ರೀ

ಪಟ್ಟದ ದೇವರನ್ನು ಮರಳಿಸಲು ನಿರಾಕರಿಸುವುದು ದರೋಡೆಗೆ ಸಮಾನ – ಶಿರೂರು ಶ್ರೀ
ಉಡುಪಿ ಜುಲೈ 17: ಕೃಷ್ಣ ಮಠದಲ್ಲಿ ಇಟ್ಟಿರುವ ಶಿರೂರು ಮಠದ ಪಟ್ಟದ ದೇವರನ್ನು ಕೊಡಲು ನಿರಾಕರಿಸುತ್ತಿರುವುದು ದರೋಡೆಗೆ ಸಮಾನವಾಗಿದ್ದು, ಪಟ್ಟದ ದೇವರನ್ನು ಪಡೆಯಲು ಅವಶ್ಯಕತೆ ಬಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಿದ್ಧ ಎಂದು ಶೀರೂರು ಮಠದ ಲಕ್ಷ್ಮೀವರ ಸ್ವಾಮೀಜಿ ತಿಳಿಸಿದರು.
ಉಡುಪಿಯ ಶ್ರೀಕೃಷ್ಣಮಠದ ಸಂಪ್ರದಾಯದ ಪ್ರಕಾರ ಅಷ್ಠಮಠಗಳಿಗೂ ಒಂದೊಂದು ಪಟ್ಟದ ದೇವರನ್ನು ಪೂಜಿಸುವುದು ಪ್ರತೀತಿ. ಪ್ರತಿನಿತ್ಯ ನಿಯಮ ನಿಷ್ಠೆಯಿಂದ ಪೂಜೆ ನಡೆಯಬೇಕು. ಒಂದುವೇಳೆ ಮಠದ ಸ್ವಾಮೀಜಿ ಅನಾರೋಗ್ಯಕ್ಕೀಡಾದರೆ, ಬೇರೆಡೆಗೆ ತೆರಳಿದರೆ ಮೂರ್ತಿಯನ್ನು ಹೊಂದಿರುವ ಪೆಟ್ಟಿಗೆಯನ್ನು ಶ್ರೀಕೃಷ್ಣ ಮಠದಲ್ಲಿ ಇಡುತ್ತಾರೆ.

ಜನರು ಬೇರೆ ಊರುಗಳಿಗೆ ತೆರಳುವಾಗ ತಮ್ಮಲ್ಲಿರುವ ಬೆಲೆಬಾಳುವ ವಸ್ತುಗಳನ್ನು ನಂಬಿಕಸ್ಥರಲ್ಲಿ ಇಟ್ಟು ಹೋಗುತ್ತಾರೆ.ಮರಳಿ ಬಂದಾಗ ತಮ್ಮ ವಸ್ತುಗಳನ್ನು ಮರಳಿಸುವುದು ಧರ್ಮ. ಒಂದು ವೇಳೆ ವಸ್ತುಗಳನ್ನು ಮರುಕಳಿಸಲು ನಿರಾಕರಿಸಿದರೆ ಅದು ದರೋಡೆಯಂತೆ, ಹಾಗೆಯೇ ಕೃಷ್ಣಮಠದಲ್ಲಿ ಪೂಜೆಗೆ ಇಟ್ಟಿರುವ ಪಟ್ಟದ ದೇವರನ್ನು ಹಿಂದಿರುಗಿಸಲು ನಿರಾಕರಿಸಿದರೆ ಅದು ದರೋಡೆಗೆ ಸಮಾನ ಎಂದು ಹೇಳಿದರು.
ಅಷ್ಠಮಠದಲ್ಲಿ ಏಳು ಸ್ವಾಮೀಜಿಗಳು ಒಂದಾಗಿ ಮಠದಲ್ಲಿ ಸಭೆ ನಡೆಸಿದ್ದಾರೆ. ಅವರಲ್ಲಿ ಒಬ್ಬರನ್ನು ನಾಯಕರನ್ನಾಗಿ ಮಾಡಿಕೊಂಡಿದ್ದಾರೆ. ಅವರು ಯಾರೆಂಬುವುದು ಎಲ್ಲರಿಗೂ ಗೊತ್ತಿದೆ ಎಂದು ಪೇಜಾವರ ಶ್ರೀಗಳ ವಿರುದ್ಧ ಪರೋಕ್ಷ ವಾಗ್ದಾಳಿ ನಡಸಿದರು.
ಶಿಷ್ಯ ಸ್ವೀಕಾರ ಮಾಡದ ಹೊರತು ಪಟ್ಟದ ದೇವರನ್ನು ಕೊಡುವುದಿಲ್ಲ ಎಂದು ಹೇಳಲು ಅವರು ಯಾರು. ಈ ಬಗ್ಗೆ ಸಭೆಗೆ ಕರೆದರೂ ನಾನು ಹೋಗುವುದಿಲ್ಲ. ಶ್ರೀಕೃಷ್ಣ ಮುಖ್ಯಪ್ರಾಣವಾದ ನನ್ನ ಪಟ್ಟದ ದೇವರನ್ನು ಪುನಃ ಮೂಲ ಮಠಕ್ಕೆ ಕರೆಸಿಕೊಳ್ಳುತ್ತಾನೆ’ ಎಂದು ಶೀರೂರು ಶ್ರೀಗಳು ಸವಾಲು ಹಾಕಿದರು.