KARNATAKA
ಮೈದಾನದ ಒಳಗೆ ಹಾಗೂ ಹೊರಗೆ ಕ್ಯಾಚ್ ಹಿಡಿಯುವುದರಲ್ಲಿ ನಮ್ಮ ಖಾಕಿ ಪಡೆಯ ಫೀಲ್ಡರ್ ಗಳು ಎತ್ತಿದ ಕೈ! – ರೀಲ್ಸ್ ಸ್ಟಾರ್ ಗಳಿಗೆ ಖಾಕಿ ವಾರ್ನಿಂಗ್

ಬೆಂಗಳೂರು ಮೇ 18: ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಐಪಿಎಲ್ ಪಂದ್ಯಾಟದ ವೇಳೆ ಮೈದಾನಕ್ಕೆ ನುಗ್ಗಿ ತಬ್ಬಿಕೊಳ್ಳುವುದಾಗಿ ಚಾಲೆಂಜ್ ಹಾಕಿದ್ದ ಇಬ್ಬರು ರೀಲ್ಸ್ ಸ್ಟಾರ್ ಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಚಂದ್ರಲೇಔಟ್’ನ ಶರಣಬಸವ ಹಾಗೂ ಜೆಪಿ.ನಗರದ ಬಾಲಾಜಿ ಬಂಧಿತರಾಗಿದ್ದು, ಇನ್ ಸ್ಟಾ ಗ್ರಾಮ್ ನಲ್ಲಿ ಕೆಕೆಆರ್ ಮತ್ತು ಆರ್’ಸಿಬಿ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಅಪ್ಪಿಕೊಳ್ಳುವುದಾಗಿ ಸವಾಲು ಹಾಕಿ ವಿಡಿಯೋ ಅಪ್ಲೋಡ್ ಮಾಡಿದ್ದರು.

ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಕಬ್ಬನ್ ಪಾರ್ಕ್ ಪೊಲೀಸು, ರೀಲ್ಸ್ ಸ್ಟಾರ್ ಗಳನ್ನು ಶನಿವಾರ ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ಇಬ್ಬರೂ ತಾವು ತಪ್ಪು ಮಾಡಿರುವುದಾಗಿ ಇಬ್ಬರೂ ಕ್ಷಮೆ ಕೋರಿದ್ದಾರೆ. ಆದಾಗ್ಯೂ, ಮುನ್ನೆಚ್ಚರಿಕೆ ಆಧಾರದ ಮೇಲೆ, ಪೊಲೀಸರು ಪಂದ್ಯ ಮುಗಿಯುವವರೆಗೆ ಇಬ್ಬರನ್ನು ಠಾಣೆಯಲ್ಲೇ ಇರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಅವರದೇ ವಿಡಿಯೋವನ್ನು ಟ್ರೋಲ್ ಮಾಡಿರುವ ಪೊಲೀಸರು ಇಂತಹ ದುಸ್ಸಾಹಸಕ್ಕೆ ಕೈಹಾಕುವ ಮುನ್ನ ಎಚ್ಚರ!
ಐಪಿಎಲ್ ಪಂದ್ಯದ ವೇಳೆ ಭದ್ರತೆ ದಾಟಿ ಮೈದಾನಕ್ಕೆ ನುಗ್ಗುವುದು ಪವರ್ ಪ್ಲೇ ಆಟವಲ್ಲ. ಹೀಗೆ ಮಾಡಿದರೆ ನೀವು ನೇರವಾಗಿ ಸೇರುವುದು ಪೊಲೀಸ್ ಜೀಪಿಗೆ! ಮೈದಾನದ ಒಳಗೆ ಹಾಗೂ ಹೊರಗೆ ಕ್ಯಾಚ್ ಹಿಡಿಯುವುದರಲ್ಲಿ ನಮ್ಮ ಖಾಕಿ ಪಡೆಯ ಫೀಲ್ಡರ್ ಗಳು ಎತ್ತಿದ ಕೈ!