Connect with us

    KARNATAKA

    ಫೆಬ್ರವರಿ 29ರಿಂದ ಪೇಟಿಎಂ ಪೇಮೆಂಟ್ಸ್, ವ್ಯಾಲೆಟ್‌, ಠೇವಣಿ, ಫಾಸ್ಟ್‌ಟ್ಯಾಗ್‌ ವ್ಯವಹಾರಕ್ಕೆ ಆರ್‌ಬಿಐ ನಿರ್ಬಂಧ..!

    ಹೊಸದಿಲ್ಲಿ : ಫೆಬ್ರವರಿ 29ರ ಬಳಿಕ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್​​ನಲ್ಲಿ ಗ್ರಾಹಕರು ಹೊಸದಾಗಿ ಠೇವಣಿ ಇಡಲು, ಕ್ರೆಡಿಟ್​ ಕಾರ್ಡ್​ ವ್ಯವಹಾರ ಮಾಡಲು, ವ್ಯಾಲೆಟ್‌​ ಮತ್ತು ಫಾಸ್ಟ್‌ಟ್ಯಾಗ್‌ಗಳಂತಹ ಪ್ರಿಪೇಯ್ಡ್ ಸೌಲಭ್ಯ, ಟಾಪ್​​-ಅಪ್ಸ್ ಬಳಸಲು ನಿಷೇಧ ವಿಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಆದೇಶ ಹೊರಡಿಸಿದೆ.

    ಮುಂದಿನ ತಿಂಗಳಿನಿಂದ, ಅಂದರೆ ಮಾರ್ಚ್​ 1ರಿಂದ ಯಾವುದೇ ಗ್ರಾಹಕರ ಖಾತೆಯಲ್ಲಿ ಠೇವಣಿಗಳನ್ನು ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​​ಗೆ ಆರ್​​ಬಿಐ ಸೂಚನೆ ನೀಡಿದೆ. ಆದರೆ ಈಗಾಗಲೇ ಖಾತೆಯಲ್ಲಿರುವ ಹಣವನ್ನು ಗ್ರಾಹಕರು ಬಳಸಬಹುದಾಗಿದೆ. ಅಲ್ಲದೇ ಈ ಆದೇಶವು ಯುಪಿಐ ಟ್ರಾನ್ಸಾಕ್ಷನ್​​ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.
    ಸೇವಿಂಗ್ಸ್ ಅಕೌಂಟ್​, ಕರೆಂಟ್​ ಅಕೌಂಟ್​, ಫಾಸ್ಟ್‌ಟ್ಯಾಗ್‌, ನ್ಯಾಷನಲ್​ ಕಾಮನ್​ ಮೊಬಿಲಿಟಿ ಕಾರ್ಡ್‌ ಸೇರಿದಂತೆ ತಮ್ಮ ಖಾತೆಗಳಿಂದ ಬ್ಯಾಲೆನ್ಸ್‌ ಹಣವನ್ನು ಯಾವುದೇ ನಿರ್ಬಂಧಗಳಿಲ್ಲದೆ ಹಿಂಪಡೆಯಬಹುದು ಅಥವಾ ಬಳಸಿಕೊಳ್ಳಬಹುದು. ಆದರೆ ಹೊಸದಾಗಿ ಠೇವಣಿ ಸೇರಿದಂತೆ ಇತರ ವ್ಯವಹಾರ ಮಾಡುವಂತಿಲ್ಲ. ಗ್ರಾಹಕರು ತಮ್ಮ ಖಾತೆಯನ್ನು ಬಾಹ್ಯ ಬ್ಯಾಂಕ್‌ಗೆ ಲಿಂಕ್ ಮಾಡುವವರೆಗೆ ಡಿಜಿಟಲ್ ಪಾವತಿ ಆಯ್ಕೆಯಾಗಿ ಪೇಟಿಎಂ ಬಳಸುವುದನ್ನು ಮುಂದುವರಿಸಬಹುದು. ಈಗಾಗಲೇ 2022ರ ಮಾರ್ಚ್​ ತಿಂಗಳಿನಲ್ಲಿ ಹೊಸ ಗ್ರಾಹಕರನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಲು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​​ಗೆ ನಿರ್ದೇಶಿಸಲಾಗಿತ್ತು. ಇದು ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್​ಬಿಐ ಆದೇಶ ಹೊರಡಿಸಿತ್ತು. 2023ರ ಅಕ್ಟೋಬರ್​ನಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​​ಗೆ ಆರ್​ಬಿಐ ದಂಡ ವಿಧಿಸಿತ್ತು. ಕೆವೈಸಿ ಸೇರಿದಂತೆ ಕೆಲ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ 5.39 ಕೋಟಿ ರೂಪಾಯಿ ಪೆನಾಲ್ಟಿ ಹಾಕಿತ್ತು.

    Share Information
    Advertisement
    Click to comment

    Leave a Reply

    Your email address will not be published. Required fields are marked *