Connect with us

    BANTWAL

    ಬಂಟ್ವಾಳದಲ್ಲಿ ಪತ್ತೆಯಾದ ಅಪರೂಪದ ಬಿಳಿ ಹೆಬ್ಬಾವು

    ಬಿಳಿ ಬಣ್ಣದ ಅಪರೂಪದ “ಆಲ್ಟಿನೊ” ಹೆಬ್ಬಾವು

    ಮಂಗಳೂರು: ಕೊರೊನಾ ಲಾಕ್ ಡೌನ್ ನಡುವೆ ದಕ್ಷಿಣಕನ್ನಡ ಜಿಲ್ಲೆಗೆ ಅಪರೂಪದ ಅತಿಥಿಯೊಬ್ಬರ ಆಗಮನವಾಗಿದೆ. ಬಿಳಿ ಬಣ್ಣದ ಅಪರೂಪದ “ಆಲ್ಟಿನೊ” ಹೆಬ್ಬಾವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕಾವಳಕಟ್ಟೆ ಎಂಬಲ್ಲಿ ಕಾಣಿಸಿಕೊಂಡಿದೆ.
    ಬಂಟ್ವಾಳದ ಕಾವಳಕಟ್ಟೆ ನಿವಾಸಿ ನೌಶಾದ್ ಎಂಬವರ ಮನೆಯಲ್ಲಿ ಬಿಳಿ ಹೆಬ್ಬಾವು ಕಾಣಿಸಿಕೊಂಡಿದ್ದು, ನಂತರ ಉರಗತಜ್ಞ ಸ್ನೇಕ್ ಕಿರಣ್ ಅವರಿಗೆ ಹಾವಿನ ಬಗ್ಗೆ ತಿಳಿಸಿದಾಗ ಅವರು ಕೂಡಲೇ ಸ್ಥಳಕ್ಕೆ ಬಂದು ಸುರಕ್ಷಿತವಾಗಿ ಹಾವನ್ನು ಹಿಡಿದು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.

    ಇಂತಹ ಬಿಳಿ ಬಣ್ಣದ ಉರಗಗಳು ಬಲು ಅಪರೂಪವಾಗಿ ಕಾಣಸಿಗುತ್ತವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಎರಡನೇ ಹಾವು ಸಿಕ್ಕಿರುವುದು. ಹೆಚ್ಚು ಕಡಿಮೆ 20 ಸಾವಿರ ಉರಗಗಳ ಜನನದಲ್ಲಿ ಒಂದು ಮಾತ್ರ ಇಂತಹ ಬಿಳಿ ಬಣ್ಣದ ಹಾವು ಜನನವಾಗುತ್ತದೆ. ಈ ಹೆಬ್ಬಾವುಗಳು ಹುಟ್ಟುವಾಗ ಚರ್ಮದ ವರ್ಣದ್ರವ್ಯದ ಕೊರತೆಯಿಂದ ಹುಟ್ಟುತ್ತವೆ. ಆದ್ದರಿಂದ ಇಂತಹ ಜೀವಿಗಳಿಗೆ “ಆಲ್ಟಿನೊ” ಎನ್ನುತ್ತಾರೆ.

    ಇಂತಹ ಬಿಳಿ ಬಣ್ಣದ ಹಾವು ಹೆಚ್ಚು ಸಮಯ ಬದುಕುವುದಿಲ್ಲ. ಯಾಕೆಂದರೆ ಉಳಿದ ಹಾವುಗಳು ಇದರ ಬಣ್ಣದ ಮೇಲೆ ಆಕರ್ಷಣೆಗೊಳಗಾಗಿ ಇದನ್ನು ತಿಂದು ಬಿಡುತ್ತವೆ. ಆದರೆ ಈ ಹಾವು ಮಾತ್ರ ಇಷ್ಟು ದೊಡ್ಡದಾಗಿ ಬೆಳೆದಿರುವುದು ವಿಶೇಷ ಎಂದು ಉರಗ ತಜ್ಞ ಸ್ನೇಕ್ ಕಿರಣ್ ಹೇಳುತ್ತಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply