DAKSHINA KANNADA
ನ್ಯಾಯಕ್ಕಾಗಿ ಹತ್ತೂರ ಓಡೆಯ ಪುತ್ತೂರಿನ ಮಹಾಲಿಂಗೇಶ್ವರನ ಮೊರೆ ಹೋದ ಸಂತ್ರಸ್ಥೆ..!
ಪುತ್ತೂರು :ಪುತ್ತೂರಿನ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ ಬೆನ್ನಿಗೆ ಸಂತ್ರಸ್ಥೆ ಹತ್ತೂರ ಓಡೆಯ ಪುತ್ತೂರಿನ ಮಹಾಲಿಂಗೇಶ್ವರನ ಮೊರೆ ಹೋಗಿದ್ದಾರೆ.
ಅರುಣ್ ಪುತ್ತಿಲ ವಿರುದ್ಧ ಅತ್ಯಾಚಾರ ಮತ್ತು ಬ್ಲ್ಯಾಕ್ ಮೇಲೆ ಆರೋಪ ವಿಚಾರವಾಗಿ ಸಂತ್ರಸ್ಥೆ ಈಗಾಗಲೇ ಪೊಲೀಸ್ ದೂರು ನೀಡಿದ್ದು , ಪುತ್ತಿಲ ವಿರುದ್ದ ಎಫ್‌ಐಆರ್ ಕೂಡ ದಾಖಲಾಗಿದೆ. ಆದ್ರೆ ಕರ್ನಾಟಕ ಹೈಕೋರ್ಟ್ ಎಫ್‌ಐಆರ್ ಹಾಗೂ ಈ ಸಂಬಂಧ ಪುತ್ತೂರಿನ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿದೆ. ಈ ಹಿನ್ನಲೆಯಲ್ಲಿ ನ್ಯಾಯಕ್ಕಾಗಿ ಇದೀಗ ಸಂತ್ರಸ್ಥೆ ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಗೆ ಬಂದಿದ್ದಾಳೆ. ಮಹಾಲಿಂಗೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿ ನ್ಯಾಯ ಸಿಗಲೆಂದು ಸಂಕಲ್ಪ ಮಾಡಿದ್ದಾರೆ. ನನಗೆ ಅನ್ಯಾಯ ಆಗಿದೆ, ನ್ಯಾಯಬೇಕೆಂದು ದೇವರ ಮೊರೆ ಹೋದಿದ್ದಾರೆ. ಆದ್ರೆ ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಲು ಹಿಂದೇಟು ಹಾಕಿದ್ದಾರೆ.
You must be logged in to post a comment Login