Connect with us

  FILM

  ವೀಕೆಂಡ್ ವಿತ್ ರಮೇಶ್ ಸೀಸನ್ 5 ರಲ್ಲಿ ಮೋಹಕ ತಾರೆ ರಮ್ಯಾ

  ಬೆಂಗಳೂರು ಮಾರ್ಚ್ 21: ಪ್ರಪಂಚದಾದ್ಯಂತ ಸಾಧನೆ ಮಾಡಿರುವ ಕನ್ನಡಿಗರ ಜೀವನಗಾಥೆಯನ್ನು ತೋರಿಸುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್ ನ 5ನೇ ಸೀಸನ್ ನಲ್ಲಿ ಈ ಬಾರಿ ಮೊದಲ ಅತಿಥಿಯಾಗಿ ಮೋಹಕ ತಾರೆ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ.


  ಕರ್ನಾಟಕದ ವಿವಿಧ ಕ್ಷೇತ್ರಗಳ ಸಾಧಕರ ಜೀವನಗಾಥೆಯನ್ನು ತೋರಿಸುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್’. ಈಗಾಗಲೇ 4 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿ 5ನೇ ಸೀಸನ್ ಗೆ ಕಾಲಿಟ್ಟಿದೆ. ಮಾರ್ಚ್ 25ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಟ, ನಿರೂಪಕ, ವಾಗ್ಮಿ ರಮೇಶ್ ಅರವಿಂದ್ ಅವರ ಸಾರಥ್ಯದಲ್ಲಿ ಪ್ರಸಾರ ಕಾಣಲಿದೆ.

  ಮೊದಲ ಎಪಿಸೋಡ್ ನಲ್ಲಿ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಕಾಣಿಸಿಕೊಳ್ಳಲಿದ್ದಾರೆ. ಅವರ ಭಾಗದ ಚಿತ್ರೀಕರಣ ಇಂದು ಆರಂಭವಾಗಲಿದೆ ಎಂದು ರಾಘವೇಂದ್ರ ಹುಣಸೂರು ಮಾಹಿತಿ ನೀಡಿದರು. ಎರಡನೇ ಎಪಿಸೋಡ್ ನಲ್ಲಿ ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ, ಅದ್ಭುತ ನೃತ್ಯಗಾರ ಪ್ರಭುದೇವ ಸಾಧಕರ ಕುರ್ಚಿಯ ಮೇಲೆ ಕೂರಲಿದ್ದಾರೆ.

  ಈ ಸೀಸನ್​ನಲ್ಲಿ ನಟ ಧ್ರುವ ಸರ್ಜಾ, ನಟಿ ರಚಿತಾ ರಾಮ್, ನಟಿ ಮಾಲಾಶ್ರೀ, ಇಶಾ ಫೌಂಡೇಶನ್​ನ ಜಗ್ಗಿ ವಾಸುದೇವ್ , ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್ ಸೇರಿದಂತೆ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply