Connect with us

    LATEST NEWS

    ಗಾಂಧಿ ಅವಮಾನ ಮಾಡಿದ್ದಕ್ಕೆ ನಳಿನ್ ಕುಮಾರ್ ಕಟೀಲ್ ಗೆ ರಾಜ್ಯಾಧ್ಯಕ್ಷ ಪಟ್ಟ – ರಮಾನಾಥ ರೈ

    ಗಾಂಧಿ ಅವಮಾನ ಮಾಡಿದ್ದಕ್ಕೆ ನಳಿನ್ ಕುಮಾರ್ ಕಟೀಲ್ ಗೆ ರಾಜ್ಯಾಧ್ಯಕ್ಷ ಪಟ್ಟ – ರಮಾನಾಥ ರೈ

    ಮಂಗಳೂರು ಅಗಸ್ಟ್ 21: ರಾಷ್ಟ್ರಪತಿ ಮಹಾತ್ಮಾಗಾಂಧಿಯವರನ್ನು ಅವಮಾನಿಸಿ ಮಾತನಾಡಿದ್ದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಗೆ ಮೋದಿ ಅಮಿತ್ ಶಾ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ಭಡ್ತಿ ನೀಡಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಶಾಸಕರಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಲು ಬಿಜೆಪಿ ಸಾಧ್ಯವಾಗಿಲ್ಲ, ಇಲ್ಲಿನ ದಲಿತ ಹಿರಿಯ ಶಾಸಕರಿಗೂ ಸಚಿವ ಸ್ಥಾನ ನೀಡಿದೇ ಬಿಜೆಪಿ ಈ ಎರಡು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

    ಕರಾವಳಿಯ ಮೂರು ಜಿಲ್ಲೆಗಳಲ್ಲಿ 19 ಜನ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಒಬ್ಬರಿಗೂ ಸಚಿವ ಸ್ಥಾನ ನೀಡದೇ ಬಿಜೆಪಿ ಅನ್ಯಾಯ ಮಾಡಿದೆ ಎಂದು ಹೇಳಿದರು. ಹೆಗಿದ್ದರೂ ಇಲ್ಲಿನ ಜನ ಬಿಜೆಪಿಗೆ ಮತ ಹಾಕುತ್ತಾರೆ ಎನ್ನುವುದು ಅವರಿಗೆ ಗೊತ್ತಿದೆ ಎಂದು ತಿಳಿಸಿದರು.

    ಮಹಾತ್ಮ ಗಾಂಧಿಜಿ ಬಗ್ಗೆ ಅಪಮಾನ ಮಾಡಿದ್ದಕ್ಕೆ ನಳಿನ್ ಕುಮಾರ್ ಕಟೀಲ್‍ಗೆ ಅಧ್ಯಕ್ಷಗಿರಿ ಸಿಕ್ಕಿದೆ. ಗಾಂಧೀಜಿ ಬಗ್ಗೆ ಅವಹೇಳನ ಮಾಡಿದರೆ ಮೋದಿ, ಶಾ ಇದನ್ನು ಸಹಿಸಲ್ಲ ಅಂತ ಹೇಳಿದ್ದರು. ಅಂತಹ ನಳಿನ್ ಕುಮಾರ್ ಕಟೀಲ್ ಗೆ ಪ್ರಮೋಷನ್ ಆಗಿದೆ ಎಂದ ಅವರ
    ಜನ ನಳೀನ್ ಕುಮಾರ್ ಕಟೀಲ್ ಮುಖ ನೋಡಿ ಓಟು ಕೊಟ್ಟಿಲ್ಲ. ಮೇಲಿನ ಮುಖ ನೋಡಿ ಮತ ಹಾಕಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಜನ ಮೇಲೆ ನೋಡುತ್ತಲೆ ನಿಂತಿದ್ದಾರೆ. ಇನ್ನು ಕೂಡಾ ಕೆಳಗೆ ನೋಡಿಲ್ಲ. ಈಗ ಆಕಾಶ ನೋಡುವ ಪರಿಸ್ಥಿತಿ ಇಲ್ಲಿನ ಜನರಿಗಾಗಿದೆ. ನಳಿನ್ ಕುಮಾರ್ ಕಟೀಲ್ ಯಾವುದೇ ಸಾಧನೆ ಮಾಡಿದ ಚರಿತ್ರೆ ,ಇತಿಹಾಸವೇ ಇಲ್ಲ ಅಂತ ಕಾಲೆಳೆದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *