Connect with us

    LATEST NEWS

    ನಳಿನ್ ಕುಮಾರ್ ಕಟೀಲ್ ಶವಸಂಸ್ಕಾರ ನಡೆಸುವುದು ಮಾತ್ರ ಬಾಕಿ – ರಮಾನಾಥ್ ರೈ

    ನಳಿನ್ ಕುಮಾರ್ ಕಟೀಲ್ ಶವಸಂಸ್ಕಾರ ನಡೆಸುವುದು ಮಾತ್ರ ಬಾಕಿ – ರಮಾನಾಥ್ ರೈ

    ಮಂಗಳೂರು ನವೆಂಬರ್ 09: ಸಂಸದ ನಳಿನ್‍ಕುಮಾರ್ ಕಟೀಲ್ ಶವ ಸಂಸ್ಕಾರ ನಡೆಸುವುದು ಮಾತ್ರ ಬಾಕಿಯಿದೆ ಎಂದು ಮಾಜಿ ಸಚಿವ ರಮಾನಾಥ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನೋಟ್ ಬ್ಯಾನ್ ಆಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ನಗರದ ಜಿಲ್ಲಾ ಕಚೇರಿ ಎದುರಲ್ಲಿ ಪ್ರತಿಭಟನಾ ಸಭೆ ನಡೆಸಿದ್ದರು. ಈ ವೇಳೆ ಮಾತನಾಡಿದ ರಮಾನಾಥ ರೈ ವಿಜಯ್ ಬ್ಯಾಂಕನ್ನು ನಮ್ಮ ಸಮುದಾಯದ ನಾಯಕರು ಸ್ಥಾಪಿಸಿ ಬೆಳೆಸಿದರು.

    ಅದು ರಾಷ್ಟ್ರೀಕೃತಗೊಂಡು ಲಾಭದಾಯಕ ಬ್ಯಾಂಕ್ ಆಗುತ್ತಿದೆ. ಆದರೆ ಈಗ ಅದರೊಂದಿಗೆ ನಷ್ಟದಲ್ಲಿರುವ ದೇನಾ ಬ್ಯಾಂಕ್ ವಿಲೀನಗೊಳಿಸಲಾಗುತ್ತಿದೆ. ಇದನ್ನು ತಡೆಯುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಬಿಜೆಪಿ ಶಾಸಕರು, ಸಂಸದರು ವಿಫಲರಾಗಿದ್ದಾರೆ. ಬ್ಯಾಂಕ್ ವಿಲೀನ ತಪ್ಪಿಸಲು ಸಾಧ್ಯವಾಗದೇ ಇದ್ದರೆ ಈ ಭಾಗದ ಸಂಸದ ನಳಿನ್ ಕುಮಾರ್ ಕಟೀಲ್ ಸತ್ತಿದ್ದಾರೆಯೇ ಅಂತ ಪ್ರಶ್ನೆ ಮಾಡುತ್ತೇನೆ ಎಂದ ಮಾಜಿ ಸಚಿವರು, ಸಂಸದರ ಶವ ಸಂಸ್ಕಾರ ನಡೆಸುವುದು ಮಾತ್ರ ಬಾಕಿಯಿದೆ ಅಂತಾ ವಿವಾದಾತ್ಮಕ ಹೇಳಿಕೆ ನೀಡಿದರು.

    VIDEO

    Share Information
    Advertisement
    Click to comment

    Leave a Reply

    Your email address will not be published. Required fields are marked *