Connect with us

    LATEST NEWS

    ಸಂಸದೆ ಶೋಭಾ ಕರಂದ್ಲಾಜೆಗೆ ಟಾಂಗ್ ನೀಡಿದ ರಮಾನಾಥ ರೈ

    ಸಂಸದೆ ಶೋಭಾ ಕರಂದ್ಲಾಜೆಗೆ ಟಾಂಗ್ ನೀಡಿದ ರಮಾನಾಥ ರೈ

    ಉಡುಪಿ ಫೆಬ್ರವರಿ 24: ಕಾಂಗ್ರೇಸ್ ಗೂಂಡಾಗಿರಿ ಹಾಗೂ ದರ್ಪದ ಬಗ್ಗೆ ರಾಹುಲ್ ಗಾಂಧಿ ಮಾತನಾಡಲಿ ಎಂದು ಹೇಳಿಕೆ ನೀಡಿದ್ದ ಶೋಭಾ ಕರಂದ್ಲಾಜೆಗೆ ರಮಾನಾಥ ರೈ ತಿರುಗೇಟ ನೀಡಿದ್ದಾರೆ.

    ಕಾಂಗ್ರೆಸ್ ನಲ್ಲಿ ಯಾರೋ ಒಬ್ಬ ತಪ್ಪು ಮಾಡಿದ್ದಾರೆ, ಅವರಿಗೆ ತಕ್ಕ ಶಾಸ್ತಿಯಾಗಿದೆ ಎಂದು ಹೇಳಿದರು.
    ಹಾಗೆ ನೋಡುವುದಾದರೆ ಆರ್ ಟಿ ಐ ಕಾರ್ಯಕರ್ತ ಬಾಳಿಗಾರನ್ನು ಕೊಂದ ನರೇಶ್ ಶೆಣೈ ಗೆ ಬಿಜೆಪಿ ವಿಐಪಿ ಪಾಸ್ ನೀಡುತ್ತೆ, ಅಲ್ಲದೆ ನರೇಂದ್ರ ಮೋದಿಯವರ ಜೊತೆ ಶೆಣೈ ಒಟ್ಟಿಗೆ ತಿರುಗಾಡುತ್ತಾರೆ ಎಂದು ಆರೋಪಿಸಿದರು.

    ದೇಶಕ್ಕಾಗಿ ಸರ್ವಸ್ವವನ್ನು ಕೊಟ್ಟ ಕುಟುಂಬದಿಂದ ಬಂದವರು ರಾಹುಲ್ ಗಾಂಧಿ, ಸ್ವಾತಂತ್ರ್ಯ ಹೋರಾಟ ಬಿಜೆಪಿ ದೃಷ್ಟಿಯಲ್ಲಿ ಸಣ್ಣದಿರಬಹುದು , ಅಲ್ಲದೆ ಬಿಜೆಪಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಇರುವವರು ಬಿಜೆಪಿಯವರು ಬ್ರಿಟಿಷರ ಜೊತೆ ಕೈ ಜೋಡಿಸಿದ್ದವರು ಎಂದು ಹೇಳಿದರು.

    ನೆಹರೂ ಕುಟುಂಬದ ರಕ್ತ ರಾಹುಲ್ ಗಾಂಧಿ ಅವರಲ್ಲಿದೆ, ರಾಹುಲ್ ಗಾಂಧಿಗೂ, ಬೇರೆಯವರಿಗೂ ಹೋಲಿಕೆ ಇಲ್ಲ
    ಪಾರಂಪರಿಕ ಇತಿಹಾಸ ಇರುವುದು ಯಾರಿಗೆ ಅನ್ನೋದು ಜನರು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply