Connect with us

    LATEST NEWS

    ಸೈನೈಡ್ ಮೋಹನ್ ಗೆ ಜೀವಾವಧಿ ಶಿಕ್ಷೆ

    ಸೈನೈಡ್ ಮೋಹನ್ ಗೆ ಜೀವಾವಧಿ ಶಿಕ್ಷೆ

    ಮಂಗಳೂರು ಫೆಬ್ರವರಿ 24: ಸೈನೆಡ್ ಕಿಲ್ಲರ್ ಮೋಹನ್ ಕುಮಾರ್ ನ ಕೊಲೆ ಮತ್ತು ಅತ್ಯಾಚಾರಕ್ಕೆ ಸಂಬಂಧಪಟ್ಟ ಐದನೇ ಪ್ರಕರಣದ ತೀರ್ಪು ಪ್ರಕಟವಾಗಿದ್ದು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
    ಬೆಳ್ತಂಗಡಿಯ ಮೇಗಿನ ಮಾಲಾಡಿ 28 ವರ್ಷ ಯುವತಿ ಯಶೋಧಾಳ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.

    ಸೈನೈಡ್ ಮೋಹನ್ 2004ರಿಂದ 2009ರ ಅವಧಿಯಲ್ಲಿ ಒಟ್ಟು 20 ಯುವತಿಯರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಇದರಲ್ಲಿ ಆತನಿಗೆ ಮೂರು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿದ್ದು ಒಂದರಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿದ್ದಾನೆ. ಇದು ಐದನೆ ಪ್ರಕರಣವಾಗಿದ್ದು ಇಲ್ಲೂ ಕೂಡ ಸೈನೈಡ್ ಮೋಹನ್ ಗೆ ಜೀವವಾಧಿ ಶಿಕ್ಷೆಯಾಗಿದೆ.

    ಪ್ರಕರಣದ ಹಿನ್ನಲೆ

    ಐದನೇ ಪ್ರಕರಣದಲ್ಲಿ ಬಂಟ್ವಾಳ ತಾಲೂಕಿನ ಮೇಗಿಲ ಮಾಲಾಡಿಯ 28 ವರ್ಷದ ಯುವತಿ ಯಶೋಧಾಳನ್ನು ತಾನು ಶಶಿಧರ್ ಪೂಜಾರಿ ಎಂದು ಪರಿಚಯ ಮಾಡಿಕೊಂಡು ಮೋಹನ್ ಆಕೆಯ ಮೊಬೈಲ್ ನಂಬರ್ ಪಡೆದಿದ್ದ. ಆನಂತ್ರ ಮದುವೆಯಾಗುವುದಾಗಿ ನಂಬಿಸಿ 2009, ಸೆಪ್ಟಂಬರ್ 24ರಂದು ಬಂಟ್ವಾಳದ ಬಿಸಿರೋಡ್ ಗೆ ಚಿನ್ನಾಭರಣ ಸಹಿತ ಬರುವಂತೆ ಹೇಳಿದ್ದ. ಬಳಿಕ ಯಶೋಧಾಳನ್ನು ಹಾಸನಕ್ಕೆ ಕರೆದೊಯ್ದು ಲಾಡ್ಜ್ ನಲ್ಲಿರಿಸಿ ಅತ್ಯಾಚಾರ ಮಾಡಿದ್ದ. ಮರುದಿನ ಬಸ್ ನಿಲ್ದಾಣಕ್ಕೆ ಕರೆದೊಯ್ದು ದೇಹ ಸಂಪರ್ಕ ಹೊಂದಿದ್ದ ಕಾರಣ ಗರ್ಭ ನಿಲ್ಲದಂತೆ ಶೌಚಾಲಯಕ್ಕೆ ಹೋಗಿ ಮಾತ್ರೆ ಸೇವಿಸುವಂತೆ ಸೈನೇಡ್ ಗುಳಿಗೆ ನೀಡಿದ್ದ. ಆಕೆ ಸೈನೆಡ್ ಸೇವಿಸುತ್ತಿದ್ದಂತೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಆ ಬಳಿಕ ಮೋಹನ್ ಲಾಡ್ಜ್ ಗೆ ತೆರಳಿ ಚಿನ್ನಾಭರಣ ಮತ್ತು ಆಕೆಯ ಉಡುಪಿನೊಂದಿಗೆ ಪರಾರಿಯಾಗಿದ್ದ.
    ಪ್ರಕರಣಕ್ಕೆ ಸಂಬಂಧಿಸಿ ‌2009 ಅಕ್ಟೋಬರ್ 21 ರಂದು ಆಗಿನ ಬಂಟ್ವಾಳ ಡಿವೈಎಸ್ಪಿ ಚಂದ್ರಗುಪ್ತ ನೇತೃತ್ವದಲ್ಲಿ ಪೊಲೀಸರು ಮೋಹನ್ ಬಂಧಿಸಿ ದೋಷಾರೋಪ ಸಲ್ಲಿಸಿದ್ದರು. ಇದೀಗ ಕೋರ್ಟ್ಗೆ 39 ಮಂದಿ ಸಾಕ್ಷಿ ಹೇಳಿದ್ದು, 43 ದಾಖಲೆ ಮತ್ತು 48 ಪೂರಕ ಸೊತ್ತುಗಳನ್ನು ಹಾಜರುಪಡಿಸಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply