Connect with us

    FILM

    ದರ್ಶನ್ ಪ್ರಕರಣ ಉಲ್ಲೇಖಿಸಿ ಸ್ಟಾರ್ ಹೀರೋಗಳ ಆರಾಧನಾ ಸಂಸ್ಕೃತಿಯನ್ನು ಟೀಕಿಸಿದ ರಾಮ್​ ಗೋಪಾಲ್ ವರ್ಮಾ

    ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಅವರ ಜೊತೆ ಪವಿತ್ರಾ ಕೂಡ ಬಂಧನಕ್ಕೆ ಒಳಗಾಗಿದ್ದಾರೆ. ಸದ್ಯ ಇವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪವಿತ್ರಾಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ರೇಣುಕಾ ಸ್ವಾಮಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಆರ್​ಜಿವಿ ಮಾತನಾಡಿದ್ದಾರೆ.

    ನಿರ್ದೇಶಕರು ಚಿತ್ರಕಥೆ ಬರೆದ ಬಳಿಕವೇ ಸಿನಿಮಾದ ಶೂಟಿಂಗ್ ಆರಂಭಿಸುತ್ತಾರೆ. ಹಲವು ಸಂದರ್ಭದಲ್ಲಿ ನಿರ್ದೇಶಕರು ಸೆಟ್​ನಲ್ಲೂ ಚಿತ್ರಕಥೆ ಬರೆಯುತ್ತಾರೆ. ಆದರೆ, ದರ್ಶನ್ ಪ್ರಕರಣದಲ್ಲಿ ಸಿನಿಮಾ ಬಿಡುಗಡೆ ಆದ ಬಳಿಕ ಚಿತ್ರಕಥೆ ಬರೆಯಲಾಗುತ್ತಿದೆ’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮ. ದರ್ಶನ್ ಅವರು ಕೊಲೆ ಕೇಸ್​ನಲ್ಲಿ ಭಾಗಿ ಆಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ಕಥೆ ಹೇಳುತ್ತಿದ್ದಾರೆ ಎಂಬರ್ಥದಲ್ಲಿ ಆರ್​ಜಿವಿ ಮಾತನಾಡಿದ್ದಾರೆ.

    ರೇಣುಕಾ ಸ್ವಾಮಿ ದರ್ಶನ್ ಅಭಿಮಾನಿ. ಅವರ ಮೇಲೆ ಹಲ್ಲೆ ಮಾಡಿದ್ದು ದರ್ಶನ್ ಹಾಗೂ ಅವರ ಆಪ್ತರು. ಈ ವಿಚಾರದ ಬಗ್ಗೆ ಆರ್​ಜಿವಿ ಮಾತನಾಡಿದ್ದಾರೆ. ‘ವೈಯಕ್ತಿಕ ಜೀವನದಲ್ಲಿ ಮಧ್ಯಪ್ರವೇಶಿಸುತ್ತಿರುವ ಅಭಿಮಾನಿಯನ್ನು ಕೊಲ್ಲಲು ಸ್ಟಾರ್​ ನಟ ಡೈ ಹಾರ್ಡ್ ಅಭಿಮಾನಿಗಳನ್ನೇ ಬಳಿಸಿಕೊಂಡಿದ್ದಾರೆ. ಇದು ಸ್ಟಾರ್ ಹೀರೋಗಳ ಆರಾಧನಾ ಸಂಸ್ಕೃತಿಯ ವಿಲಕ್ಷಣತೆಗೆ ಸೂಕ್ತ ಉದಾಹರಣೆಯಾಗಿದೆ. ತಾವು ಆರಾಧಿಸುವ ನಟ ಹೀಗೆಯೇ ಇರಬೇಕು ಎಂದು ಬಯಸುತ್ತಾ ಹೋದಾಗ ಆಗುವ ಅಡ್ಡಪರಿಣಾಮಗಳು ಇವು’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

    ದರ್ಶನ್ ಫ್ಯಾಮಿಲಿ ಮ್ಯಾನ್ ಆಗಿರಬೇಕು ಎಂದು ರೇಣುಕಾಸ್ವಾಮಿ ಬಯಸಿದ್ದರು. ಅವರು ಪವಿತ್ರಾ ಬದಲು ವಿಜಯಲಕ್ಷ್ಮಿ ಜೊತೆ ಇರಲಿ ಎಂದು ರೇಣುಕಾ ಸ್ವಾಮಿ ಅಂದುಕೊಂಡಿದ್ದರು. ಈ ಕಾರಣಕ್ಕೆ ಪವಿತ್ರಾಗೆ ಅವರು ಅಶ್ಲೀಲವಾಗಿ ಮೆಸೇಜ್ ಮಾಡಿದ್ದರು. ಇದರಿಂದ ಅವರ ಪ್ರಾಣವೇ ಹೋಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply