BELTHANGADI
ದೈವೀ ಪವಾಡ ತೋರಿಸಿದ ಬೆಳ್ತಂಗಡಿ ದಿಡುಪೆಯಲ್ಲಿ ನಡೆದ ಅಚ್ಚರಿ ಘಟನೆ………!

ದೈವೀ ಪವಾಡ ತೋರಿಸಿದ ಬೆಳ್ತಂಗಡಿ ದಿಡುಪೆಯಲ್ಲಿ ನಡೆದ ಅಚ್ಚರಿ ಘಟನೆ………!
ಬೆಳ್ತಂಗಡಿ ಅಗಸ್ಟ್ 13: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಜಿಲ್ಲೆಯ ಹಲವು ಪ್ರದೇಶಗಳು ಪ್ರವಾಹಪೀಡಿತವಾಗಿ ಮನೆ , ಕೃಷಿ ಭೂಮಿ ತೋಟಗಳು ಕೊಚ್ಚಿ ಹೋಗಿದೆ. ಬೆಳ್ತಂಗಡಿ ತಾಲೂಕಿನ ಬಹುತೇಕ ಪ್ರದೇಶಗಳು ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿದ್ದು, ಜನ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಆದರೆ ಅಚ್ಚರಿ ಘಟನೆಯೊಂದು ನಡೆದಿದ್ದು, ಇಷ್ಟೆಲ್ಲಾ ಅನಾಹುತಗಳ ಮಧ್ಯೆ ದೈವಸ್ಥಾನಗಳಿಗೆ ಯಾವುದೇ ಹಾನಿಯಾಗದೇ ಇರುವುದು ಅಚ್ಚರಿ ಮೂಡಿಸಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉಂಟಾದ ಜಲ ಸ್ಫೋಟಕ್ಕೆ ಮನೆ, ಸುತ್ತಲ ಕೃಷಿ ಭೂಮಿ ಕೊಚ್ಚಿ ಹೋದರೂ, ತುಳುನಾಡಿನ ಕಾರಣಿಕ ಶಕ್ತಿಯ ಗುಡಿಗಳಿಗೆ ಕಿಂಚಿತ್ತೂ ಹಾನಿಯಾಗಿಲ್ಲ. ಬೆಳ್ತಂಗಡಿ ತಾಲೂಕಿನ ದಿಡುಪೆ ಪ್ರದೇಶದಲ್ಲಿ ನೆರೆ ಹಾವಳಿಗೆ ಬೆಟ್ಟ ಸ್ಫೋಟಗೊಂಡು ಬೃಹತ್ ಮರಗಳು ಛಿದ್ರ, ಛಿದ್ರವಾಗಿ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ನೆರೆಹಾವಳಿಗೆ ಗುಡ್ಡ ಕುಸಿದು ಕೊಂಡು ಮರಗಳ ಜೊತೆಗೆ ನದಿಯಲ್ಲಿ ತೇಲಿ ಬಂದು ಸೇತುವೆ ಹಾಗೂ ಅಕ್ಕಪಕ್ಕದಲ್ಲಿರುವ ಮನೆಗಳನ್ನು ಮತ್ತು ಕೃಷಿ ಭೂಮಿಗಳನ್ನು ಬಿಡದೆ ಸರ್ವನಾಶ ಮಾಡಿದೆ.

ಆದರೆ ಅದರ ಸನಿಹದಲ್ಲೇ ಇರುವ ರಕ್ತೇಶ್ವರಿ ಹಾಗೂ ಗುಳಿಗನ ಸಾನಿಧ್ಯವನ್ನು ಒಂದಿಂಚು ಮುಟ್ಟದೆ ಅಥವಾ ಒಂಚೂರು ಹಾನಿ ಮಾಡದೇ ಮುಂದಕ್ಕೆ ಸಾಗಿ ಹೋಗಿರುವುದು ಅಚ್ಚರಿಗೆ ಕಾರಣವಾಗಿದೆ. ಸುತ್ತಮುತ್ತಲ ಪ್ರದೇಶಗಳೆಲ್ಲವೂ ಸಂಪೂರ್ಣ ನಾಶವಾಗಿದ್ದರೂ ಕೂಡ ದೈವಸ್ಥಾನಕ್ಕೆ ಯಾವುದೇ ರೀತಿಯ ಹಾನಿಯಾಗದೇ ಇರುವುದು ಸ್ಥಳೀಯರಲ್ಲಿ ಆಶ್ಚರ್ಯ ಉಂಟುಮಾಡಿದೆ. ದೈವೀ ಪವಾಡಕ್ಕೆ ಬೆರಗಾಗಿದ್ದಾರೆ.