ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ನಿರ್ಲಕ್ಷಕ್ಕೆ ಬಲಿಯಾದಳೇ ದೇವಳದ ಸಾಕಾನೆ ಇಂದಿರಾ ?

ಉಡುಪಿ ಅಗಸ್ಟ್ 13: ರಾಜ್ಯದ ಪ್ರಸಿದ್ದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಸಾಕಾನೆ ಇಂದಿರಾ ಇಂದು ಮೃತಪಟ್ಟಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಆನೆ ಇಂದಿರಾ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದೆ. ಆನೆಗೆ 62 ವರ್ಷ ವಯಸ್ಸಾಗಿತ್ತು.

ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಕೇರಳ ಮೂಲದ ಟಿಂಬರ್ ಮರ್ಚೆಂಟ್ ಒಬ್ಬರು ದಾನವಾಗಿ ನೀಡಿದ್ದ ಆನೆ ಇದಾಗಿದ್ದು, ಆನೆಯನ್ನು ಬಾಳೆಹೊನ್ನೂರಿನಿಂದ ಕರೆತರಲಾಗಿತ್ತು. ಇಂದಿರಾಗೆ 62 ವರ್ಷ ವಯಸ್ಸಾಗಿತ್ತು, ಇಂದಿರಾ ಆನೆ ಕಳೆದ 22 ವರ್ಷದಿಂದ ಮೂಕಾಂಬಿಕೆ ದೇವಿಯ ಸೇವೆಯಲ್ಲಿತ್ತು.

ಕಳೆದ 20 ದಿನಗಳಿಂದ ಆನೆ ಜ್ವರದಿಂದ ಬಳಲುತ್ತಿತ್ತು ಎಂದು ಹೇಳಲಾಗಿದ್ದು, ಆನೆ ತೀವ್ಪ ಜ್ವರದಿಂದ ಬಳಲುತಿದ್ದರೂ ಕೂಡ ಆನೆಯ ಮಾವುತ ಯಾವುದೇ ರೀತಿಯ ವಿಶೇಷ ಉಪಚಾರ ಮಾಡಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ ದೇವಸ್ಥಾನದ ಆಡಳಿತ ಮಂಡಳಿಯೂ ಆನೆ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯವಹಿಸಿತ್ತು ಎಂದು ಸ್ಥಳೀಯರು ಹಾಗೂ ಭಕ್ತರು ಆರೋಪಿಸಿದ್ದಾರೆ.  ಮಾವುತ ಹಾಗೂ ಆಡಳಿತ ನಿರ್ಲಕ್ಷಕ್ಕೆ ತೀವ್ರ ಜ್ವರದಿಂದ ಬಳಲಿದ್ದು ಇಂದಿರಾ ಕೊನೆಯುಸಿರೆಳೆದಿದ್ದಾಳೆ.

Facebook Comments

comments