LATEST NEWS
ಹಡಿಲು ಭೂಮಿ ಕೃಷಿಗೆ ನಟ ರಕ್ಷಿತ್ ಶೆಟ್ಟಿ ಚಾಲನೆ..ಗದ್ದೆಗಳಿದು ನಾಟಿ ಮಾಡಿದ ರಕ್ಷಿತ್ ಶೆಟ್ಟಿ
ಉಡುಪಿ: ಇತ್ತೀಚೆಗಿನ ವಿವಾದಗಳ ಬಳಿಕ ನಟ ರಕ್ಷಿತ್ ಶೆಟ್ಟಿ ಇಂದು ಬ್ರಹ್ಮಾವರ ತಾಲೂಕಿನ ವಾರಂಬಳ್ಳಿಯಲ್ಲಿ ನಡೆದ ಹಡಿಲು ಭೂಮಿ ಕೃಷಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಗದ್ದೆಗಳಿದು ಭತ್ತದ ನಾಟಿ ಮಾಡಿದರು.
ಬ್ರಹ್ಮಾವರದಲ್ಲಿ ಕೇದಾರೋತ್ಥಾನ ಟ್ರಸ್ಟ್ ಹಮ್ಮಿಕೊಂಡಿದ್ದ ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ರಕ್ಷಿತ್ ಶೆಟ್ಟಿ, ಚಿಕ್ಕವನಾಗಿದ್ದಾಗ ಕಣ್ಣು ಹಾಯಿಸಿದಷ್ಟು ಭೂಮಿಯಲ್ಲಿ ಭತ್ತದ ಕೃಷಿ ಕಾಣುತ್ತಿತ್ತು. ಕಳೆದ 10 ರಿಂದ 15 ವರ್ಷಗಳಲ್ಲಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ನನ್ನ ತಂದೆ ಇಂದಿಗೂ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು.
ಹಿಂದೆ, ಕರಾವಳಿಯಲ್ಲಿ ಕೃಷಿಯೇ ಪ್ರಧಾನವಾಗಿತ್ತು. ನಗರಗಳತ್ತ ಯುವಕರು ವಲಸೆ ಹೋ ಗಿದ್ದರಿಂದ ಕೃಷಿ ಕಡಿಮೆಯಾಯಿತು. ಈಗ ಮತ್ತೆ ಕೃಷಿಯತ್ತ ಒಲವು ಶುರುವಾಗಿದೆ. ಬೆಂಗಳೂರಿಗೆ ದುಡಿಯಲು ಬಂದಿದ್ದವರು ಕೃಷಿ ಮಾಡಲು ತವರಿನತ್ತಮುಖ ಮಾಡುತ್ತಿದ್ದಾರೆ. ಹಡಿಲು ಭೂಮಿ ಕೃಷಿ ಆಂದೋ ಲನ’ ಕೂಡ ಉಡುಪಿ ಹಾಗೂ ಮಂಗಳೂರಿನ ಯುವಕರನ್ನು ಮತ್ತೆ ಕೃಷಿಯತ್ತ ಸೆಳೆಯುತ್ತದೆ ಎಂಬ ವಿಶ್ವಾಸವಿದೆ. ಇಂತಹ ಕಾರ್ಯಕ್ರಮಗಳ ಭಾಗವಾಗಿರುವುದಕ್ಕೆ ಸಂತೋಷವಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದರು.
ಸಾಂಪ್ರದಾಯಿಕ ಅಡಿಕೆ ಹಾಳೆ ಯ ಟೋಪಿ ಧರಿಸಿದ್ದ ಕ್ಷಿತ್ ಶೆಟ್ಟಿಯನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.