LATEST NEWS
ಹಿಮಾಲಯಕ್ಕೆ ತೆರಳಿದ ಸೂಪರ್ ಸ್ಟಾರ್ ರಜನಿಕಾಂತ್
ಹಿಮಾಲಯಕ್ಕೆ ತೆರಳಿದ ಸೂಪರ್ ಸ್ಟಾರ್ ರಜನಿಕಾಂತ್
ಚೈನೈ ಮಾರ್ಚ್ 13: ಸದ್ಯ ತಮಿಳುನಾಡಿನಲ್ಲಿ ರಾಜಕೀಯ ಪ್ರವೇಶಕ್ಕೆ ಸಿದ್ದತೆ ನಡೆಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಹಿಮಾಲಯದ ಪ್ರವಾಸದಲ್ಲಿದ್ದಾರೆ.
ಆಗಾಗ್ಗೆ ಹಿಮಾಲಯಕ್ಕೆ ತೆರಳಿ ಧ್ಯಾನ ಮಗ್ನರಾಗುವ ಅಭ್ಯಾಸ ಹೊಂದಿರುವ ರಜನಿ ಶನಿವಾರ ಚೆನೈನಿಂದ ಉತ್ತರಾಖಂಡ್ ದುನಾಗಿರಿಗೆ ತೆರಳಿದ್ದಾರೆ.
ಅಲ್ಲಿ ಸಂತರ ಜತೆ ಕೆಲಕಾಲ ಕಳೆಯಲಿದ್ದು, ಧ್ಯಾನದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಜನಿಕಾಂತ್ ಅವರು ಪುರಾತನ ಸ್ವಾಮಿಜಿ ಎಂದೇ ಹೇಳಲಾಗುವ ಮಹಾವತಾರ್ ಬಾಬಾಜಿ ಅವರ ಗುಹೆಗೂ ತೆರಳಲಿದ್ದಾರೆ.
2 ಸಾವಿರ ವರ್ಷಗಳಿಂದ ಹಿಮಾಲಯ ಪರ್ವತದಲ್ಲಿ ವಾಸಿಸುತ್ತಿದ್ದಾರೆ ಎಂದು ನಂಬಲಾಗಿರುವ ಮಹಾವತಾರ್ ಬಾಬಾಜಿ ಕುರಿತು ಯಾವುದೇ ಐತಿಹಾಸಿಕ ಉಲ್ಲೇಖಗಳು ಲಭ್ಯವಿಲ್ಲ.
ಆದರೆ ಪರಮಹಂಸ ಯೋಗಾನಂದ ಆತ್ಮಕಥೆಯಲ್ಲಿ ಇವರ ಕುರಿತಾಗಿ ಹೇಳಿರುವಂತ ವಿಷಯಗಳೇ ಇವರ ಇರುವಿಕೆಗೆ ಇರುವ ದಾಖಲೆಗಳಾಗಿವೆ.
ಬಾಬಾ ಅವರನ್ನು ರಜನಿಕಾಂತ್ ತಮ್ಮ ಗುರುಗಳಾಗಿ ಸ್ವೀಕರಿಸಿದ್ದು, ಹಿಮಾಲಯಕ್ಕೆ ಭೇಟಿ ನೀಡಿದ ಪ್ರತಿಬಾರಿಯೂ ಗುಹೆಗೆ ತೆರಳುತ್ತಾರೆ.
ಈ ಗುಹೆ ಸಮದ್ರ ಮಟ್ಟದಿಂದ 5000 ಅಡಿ ಎತ್ತರದಲ್ಲಿದೆ.
You must be logged in to post a comment Login