LATEST NEWS
ಅಕ್ರಮವಾಗಿ ಗನ್ ಇಟ್ಟುಕೊಂಡಿದ್ದ ಮಹಿಳಾ ಎಸ್ ಐ ಅರೆಸ್ಟ್…!!
ಹರಿಯಾಣ ಮಾರ್ಚ್ 05: ತನ್ನ ಪ್ಲ್ಯಾಟ್ ನಲ್ಲಿ ಅಕ್ರಮವಾಗಿ ಎರಡು ಪಿಸ್ತೂಲ್ ಗಳನ್ನು ಇಟ್ಟುಕೊಂಡಿದ್ದ ಮಹಿಳಾ ಟ್ರೈನಿ ಪೋಲೀಸ್ ಅನ್ನು ಅಮಾನತುಗೊಳಿಸಿದ ಘಟನೆ ನಡೆದಿದೆ. ಕುಸ್ತಿ ಪಟು ನೈನಾ ಕನ್ವಾಲ್ ಅವರು ರಾಜಸ್ಥಾನ ಪೊಲೀಸ್ನಲ್ಲಿ ಟ್ರೈನಿ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದರು. ಸದ್ಯ ಆಕೆಯನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿತ್ತು.
ಕಿಡ್ನಾಪ್ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಸುಮಿತ್ ನಂದಲ್ನ ಹುಡುಕಾಟಕ್ಕಾಗಿ ರೋಹ್ಟಕ್ನಲ್ಲಿರುವ ಎಸ್ಐ ನೈನಾ ಕನ್ವಾಲ್ ಅವರ ಫ್ಲಾಟ್ನ ಮೇಲೆ ದೆಹಲಿ ಪೊಲೀಸರು ಗುರುವಾರ ದಾಳಿ ನಡೆಸಿದಾಗ ಕನ್ವಾಲ್ ಎರಡು ಪಿಸ್ತೂಲ್ಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ.
ದೆಹಲಿ ಪೊಲೀಸರು ದಾಳಿಯ ಸಮಯದಲ್ಲಿ ಸಬ್ ಇನ್ಸ್ಪೆಕ್ಟರ್ ನೈನಾ ಕನ್ವಾಲ್ ಅವರ ಫ್ಲಾಟ್ನಲ್ಲಿ ಎರಡು ಪರವಾನಗಿ ಇಲ್ಲದ ಪಿಸ್ತೂಲ್ಗಳನ್ನು ಪತ್ತೆ ಮಾಡಿದರು. ಪೊಲೀಸರು ಎರಡೂ ಪಿಸ್ತೂಲ್ಗಳನ್ನು ವಶಪಡಿಸಿಕೊಂಡರು ಮತ್ತು ನೈನಾ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪದ ಮೇಲೆ ಇದೀಗ ರಾಜಸ್ಥಾನ ಪೊಲೀಸ್ನ ಹೆಚ್ಚುವರಿ ಮಹಾನಿರ್ದೇಶಕ (ಅಪರಾಧ) ಎಸ್ ಸೆಂಗಾಥಿರ್ ಅವರು ನೈನಾ ಕನ್ವಾಲ್ ಅವರನ್ನು ಅಮಾನತು ಮಾಡಿದ್ದಾರೆ.