LATEST NEWS
ಕೊರಗಜ್ಜನಿಗೆ ಗುಡಿ ನಿರ್ಮಿಸಿ ಪೂಜಿಸುತ್ತಿದ್ದ ಖಾಸಿಂ ಸಾಹೇಬ್ ನಿಧನ
ಮಂಗಳೂರು ಮಾರ್ಚ್ 05: ಕೊರಗಜ್ಜನಿಗೆ ಗುಡಿ ನಿರ್ಮಿಸಿ ಪೂಜೆ ಮಾಡಿಕೊಂಡು ಬರುತ್ತಿದ್ದ ಖಾಸೀಂ ಸಾಹೇಬ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 66 ವರ್ಷ ವಯಸ್ಸಾಗಿತ್ತು, ಖಾಸೀಂ ಸಾಹೇಬ್ ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವರಾಗಿದ್ದು, ಸದ್ಯ ಮಂಗಳೂರು ಹೊರವಲಯದ ಮುಲ್ಕಿ ಬಳ್ಕುಂಜೆಯಲ್ಲಿ ನೆಲೆಸಿದ್ದರು.
35 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದ ಕೇರಳದ ಪಲಕ್ಕಾಡ್ ಜಿಲ್ಲೆಯ ಚಿತ್ತಲೆಂಚೇರೆ ಪಿ ಕಾಸಿಂ ಸಾಬ್ ಮಂಗಳೂರು ಹೊರವಲಯ ಮೂಲ್ಕಿಯ ಬಳ್ಕುಂಜೆಯಲ್ಲಿ ಕೊರಗಜ್ಜನ ದೈವಸ್ಥಾನ ನಿರ್ಮಿಸಿ ಆರಾಧಿಸುತ್ತಿದ್ದರು.
ಈ ದೈವಸ್ಥಾನಕ್ಕೆ ಗ್ರಾಮ ಹಾಗೂ ಸುತ್ತಮುತ್ತಲಿನ ವಿವಿಧ ಜಾತಿ, ವಿವಿಧ ಧರ್ಮದ ಜನ ಬಂದು ಕೊರಗಜ್ಜನಿಗೆ ಆರಾಧನೆ ಸಲ್ಲಿಸುತ್ತಿದ್ದಾರೆ. ಕಾಸಿಂ ಸಾಬ್ ಪ್ರತಿದಿನ ಕೊರಗಜ್ಜನಿಗೆ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಿಸುತ್ತಿದ್ದರು.
You must be logged in to post a comment Login