FILM
ಮಲೆಯಾಳಂನಲ್ಲಿ ರಾಜ್ ಬಿ ಶೆಟ್ಟಿ ಆರ್ಭಟ – ಮಮ್ಮುಟ್ಟಿ ಎದುರೇ ಖಡಕ್ ವಿಲನ್
ಕೇರಳ ಮೇ 13: ಕನ್ನಡದಲ್ಲಿ ಅತ್ಯುತ್ತಮ ಚಿತ್ರಗಳನ್ನು ನೀಡಿ, ಸದ್ಯ ಟ್ರೆಂಡಿಂಗ್ ನಲ್ಲಿರುವ ರಾಜ್ ಬಿ ಶೆಟ್ಟಿ ಮಲೆಯಾಳಂ ಸಿನೆಮಾದಲ್ಲಿ ನಟಿಸಿದ್ದಾರೆ. ಮಲೆಯಾಳಂನ ಸೂಪರ್ ಸ್ಟಾರ್ ಮಮ್ಮುಟ್ಟಿ ಯ ಟರ್ಬೋ ಸಿನೆಮಾದಲ್ಲಿ ರಾಜ್ ಬಿ ಶೆಟ್ಟಿ ಅಬ್ಬರ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಕನ್ನಡದಲ್ಲಿ ಒಂದು ಮೊಟ್ಟೆಯ ಕಥೆ, ಗರುಡ ಗಮನ ರಿಷಭ್ ವಾಹನ, ಟೋಬಿ ಸೇರಿದಂತೆ ಅತ್ಯುತ್ತಮ ಚಿತ್ರಗಳನ್ನು ನೀಡಿರುವ ರಾಜ್ ಬಿ ಶೆಟ್ಟಿ ಇದೀಗ ಮಲೆಯಾಳಂ ಸಿನೆಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಅದು ಮಲೆಯಾಳಂನ ಸೂಪರ್ ಸ್ಟಾರ್ ಮಮ್ಮುಟ್ಟಿ ಎದುರು. ಇತ್ತೀಚೆಗೆ ರೀಲಿಸ್ ಆಗಿರುವ ಟರ್ಬೋ ಸಿನೆಮಾದಲ್ಲಿ ರಾಜ್ ಬಿ ಶೆಟ್ಟಿ ಅಬ್ಬರ ನೋಡಿ ಅಭಿಯಾನಿಗಳು ಶಾಕ್ ಆಗಿದ್ದು, ಕನ್ನಡದ ನಟ, ಮಲೆಯಾಳಂನ ಮಮ್ಮುಕಾಕ ಎದುರು ಈ ರೀತಿಯ ಅಬ್ಬರ ಗ್ರೇಟ್ ಅಂದಿದ್ದಾರೆ.
ಕನ್ನಡದಲ್ಲೂ ಗರುಡ ಗಮನ ಸಿನೆಮಾದಲ್ಲಿ ತನ್ನ ಭರ್ಜರಿ ಆಕ್ಟಿಂಗ್ ಮೂಲಕ ಇಡೀ ದೇಶದಲ್ಲಿ ಮಾತಾಗಿದ್ದ ರಾಜ್ ಬಿ ಶೆಟ್ಟಿ ಮತ್ತೆ ಇದೀಗ ಅಭಿಮಾನಿಗಳಿಗೆ ರಸದೌತಣ ನೀಡಲಿದ್ದಾರೆ.
You must be logged in to post a comment Login