LATEST NEWS
ಮಂಗಳೂರು – ಬಿಸಿಲ ಬೇಗೆಗೆ ತಂಪೆರೆದ ಮಳೆರಾಯ

ಮಂಗಳೂರು ಮಾರ್ಚ್ 19 : ದೇಶದಲ್ಲೇ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿದ್ದ ಮಂಗಳೂರಿನಲ್ಲಿ ಇಂದು ಮುಂಜಾನೆ ಮಳೆರಾಯ ಕೃಪೆ ತೋರಿದ್ದಾನೆ,
ಮುಂಜಾನೆ 6.30 ರ ಸುಮಾರಿಗೆ ಆರಂಭವಾದ ಮಳೆ ಸುಮಾರು ಒಂದು ಗಂಟೆ ವರೆಗೆ ಒಂದೇ ಸಮನೆ ಸುರಿದಿದ್ದು, ಮಳೆಗಾಲದ ನೆನಪನ್ನು ತಂದಿತ್ತು, ಏಕಾಎಕಿ ಸುರಿದ ಮಳೆಯಿಂದ ನಗರದಲ್ಲಿ ವಿದ್ಯುತ್ತ ಕೈಕೊಟ್ಟಿತ್ತು. ನೀರು ಹರಿವ ಚರಂಡಿಗಳಲ್ಲಿ ಕಸ ತುಂಬಿಕೊಂಡಿದ್ದರ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯಲು ಅಡಚಣೆಯಾಗಿ ರಸ್ತೆಯಲ್ಲೇ ಹರಿಯಿತು, ಆದ್ರೆ ಬಿಸಿ ಬೇಗೆಯಿಂದ ಬಳಲಿದ್ದ ಮಂಳೂರಿಗರಿಗೆ ಒಂದು ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆ ಕೊಂಚ ತಂಪಾಗಿರಿಸಿದೆ.

ಇನ್ಕನೂ ಕೇಂದ್ರ ಹವಮಾನ ಇಲಾಖೆ ವರದಿ ಪ್ರಕಾರ, ಕರಾವಳಿ, ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ 2 ದಿನಗಳ ಕಾಲ ಗುಡುಗು ಸಹಿತ ಮಳೆ ಮುಂದುವರೆಯುವ ಸಾಧ್ಯತೆಗಳಿದ್ದು, ಇದರ ಜತೆಗೆ ಉಷ್ಣಾಂಶವೂ 3 ಡಿ.ಸೆ.ಹೆಚ್ಚಾಗಲಿದೆ ಎಂದು ಮುನ್ಸೂಚನೆ ಕೊಟ್ಟಿದೆ.
ಕರಾವಳಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಸೋಮವಾರದ ವರೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಿಂಚು ಸಹಿತ ಮಳೆಯಾಗಲಿದೆ.
ಇನ್ನು ಉಡುಪಿ ಜಿಲ್ಲೆಯಲ್ಲೂ ಕೆಲವು ಪ್ರದೇಶಗಳಲ್ಲಿ ಮಳೆರಾಯ ಕರುಣೆ ತೋರಿದ್ದು, ಮಣಿಪಾಲ ಸಹಿತ ಉಡುಪಿ ನಗರದ ವಿವಿದ ಕಡೆಗಳಲ್ಲಿ ಮಳೆ ಸುರಿದಿದೆ.