LATEST NEWS
ಕೇರಳದ ಮಹಾಮಳೆಗೆ ಮಂಗಳೂರಿನಿಂದ ಹೊರಡುವ ಬಹುತೇಕ ರೈಲುಗಳ ಸಂಚಾರ ಸ್ಥಗಿತ
ಕೇರಳದ ಮಹಾಮಳೆಗೆ ಮಂಗಳೂರಿನಿಂದ ಹೊರಡುವ ಬಹುತೇಕ ರೈಲುಗಳ ಸಂಚಾರ ಸ್ಥಗಿತ
ಮಂಗಳೂರು ಅಗಸ್ಟ್ 17 : ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರೈಲು ಸಂಚಾರ ಸಂಪೂರ್ಣ ಅಸ್ತವ್ಯವಸ್ತಗೊಂಡಿದ್ದು, ದಕ್ಷಿಣ ರೈಲ್ವೆ ಬಹುತೇಕ ರೈಲು ಸಂಚಾರವನ್ನು ಸ್ಥಗಿತಗೊಳಿಸಿದೆ.
ಪಾಲ್ಘಾಟ್ ಮತ್ತು ತಿರುವನಂತಪುರ ವಿಭಾಗಗಳಲ್ಲಿ ಮಣ್ಣು ಕುಸಿತ ಹಾಗೂ ನೆರೆ ಸ್ಥಿತಿಯಿಂದಾಗಿ ನಾಲ್ಕು ದಿನಗಳಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ನಡುವೆ ಬಸ್ ಸಂಚಾರವೂ ಇಲ್ಲದೆ ಅತ್ತ ರೈಲು ಪ್ರಯಾಣವೂ ಇಲ್ಲದೆ ಪ್ರಯಾಣಿಕರು ಸಂಕಷ್ಟ ಪಡುವಂತಾಗಿದೆ.
ಮಂಗಳೂರಿನ ಮೂಲಕ ಹಾದು ಹೋಗುವ ಬಹುತೇಕ ರೈಲುಗಳು ಕೇರಳದ ಮೂಲಕ ತಮಿಳುನಾಡಿಗೆ ಸಂಚರಿಸುತ್ತಿದ್ದು, ಕೇರಳ, ತಮಿಳುನಾಡಿಗೆ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಶುಕ್ರವಾರ ( 17.08.2018) ಸಂಪೂರ್ಣ ರದ್ದಾದ ರೈಲುಗಳು ಪಟ್ಟಿ
ಮಂಗಳೂರು ಸೆಂಟ್ರಲ್–ಚೆನ್ನೈ ಸೆಂಟ್ರಲ್ ಮೇಲ್ (ರೈ.ಸಂ. 12602),
ಮಂಗಳೂರು ಸೆಂಟ್ರಲ್– ತಿರುವನಂತಪುರ (ರೈ.ಸಂ. 16348) ಎಕ್ಸ್‌ಪ್ರೆಸ್,
ಮಂಗಳೂರು ಸೆಂಟ್ರಲ್–ಚೆನ್ನೈ ಸೆಂಟ್ರಲ್ (ರೈ.ಸಂ. 12686) ಎಕ್ಸ್‌ಪ್ರೆಸ್,
ಮಂಗಳೂರು ಸೆಂಟ್ರಲ್– ಚೆನ್ನೈ ಸೆಂಟ್ರಲ್ (ರೈ.ಸಂ. 16603) ಮಾವೇಲಿ ಎಕ್ಸ್‌ಪ್ರೆಸ್,
ಮಂಗಳೂರು ಸೆಂಟ್ರಲ್– ತಿರುವನಂತಪುರ (ರೈ.ಸಂ. 16630),
ಮಂಗಳೂರು ಜಂಕ್ಷನ್–ಕೂಚುವೇಲಿ (ರೈ.ಸಂ. 16356 ) ಅಂತ್ಯೋದಯ ಎಕ್ಸ್‌ಪ್ರೆಸ್
ರೈಲು ಸೇವೆಯನ್ನು ಶುಕ್ರವಾರ ರದ್ದುಪಡಿಸಲಾಗಿದೆ.
ಮಂಗಳೂರು–ಚೆನ್ನೈ (ರೈ.ಸಂ. 16860) ಎಗ್ಮೋರ್ ಎಕ್ಸ್‌ಪ್ರೆಸ್,
ಮಂಗಳೂರು ಸೆಂಟ್ರಲ್– ನಾಗರಕೊಯಿಲ್ ಜಂಕ್ಷನ್ (ರೈ.ಸಂ. 16605), ಈರ್ನಾಡ ಎಕ್ಸ್‌ಪ್ರೆಸ್,
ಮಂಗಳೂರು–ನಾಗರಕೊಯಿಲ್ (ರೈ.ಸಂ. 16649) ಎಕ್ಸ್‌ಪ್ರೆಸ್,
ಮಂಗಳೂರು–ಕೊಯಿಮತ್ತೂರು (ರೈ.ಸಂ. 22609) ಎಕ್ಸ್‌ಪ್ರೆಸ್,
ಕಣ್ಣೂರು–ತ್ರಿವೆಂದ್ರಂ (ರೈ.ಸಂ. 12081) ಜನ ಶತಾಬ್ದಿ ಎಕ್ಸ್‌ಪ್ರೆಸ್,
ಕಣ್ಣೂರು–ಅಲೆಪಿ (ರೈ.ಸಂ. 16308) ಎಕ್ಸ್‌ಪ್ರೆಸ್
ರೈಲುಗಳ ಸಂಚಾರವನ್ನೂ ಶುಕ್ರವಾರ ರದ್ದುಪಡಿಸಲಾಗಿದೆ.
ಅಲ್ಲದೆ
ಕಣ್ಣೂರು/ಕಾರವಾರ- ಬೆಂಗಳೂರು (ರೈ.ಸಂ. 16518/16524) ಎಕ್ಸ್‌ಪ್ರೆಸ್
ಬೆಂಗಳೂರು – ಕಣ್ಣೂರು/ಕಾರವಾರ (ರೈ.ಸಂ . 16511/16513)ಎಕ್ಸ್ ಪ್ರೆಸ್
ಚೆನೈ ಸೆಂಟ್ರಲ್ – ಮಂಗಳೂರು ಸೆಂಟ್ರಲ್ (ರೈ.ಸಂ. 12601 ) ಎಕ್ಸ್ ಪ್ರೆಸ್
ಚೆನೈ ಸೆಂಟ್ರಲ್ – ಮಂಗಳೂರು ಸೆಂಟ್ರಲ್ (ರೈ.ಸಂ 22637)ವೆಸ್ಟ್ ಕೋಸ್ಟ್ ಎಕ್ಸ್ ಪ್ರೆಸ್
ಶುಕ್ರವಾರ (17.08.2018) ಸಂಪೂರ್ಣ ರದ್ದು ಪಡಿಸಲಾಗಿದೆ.