ಸುಳ್ಯ – ಮನೆ ಮೇಲೆ ಮರ ಬಿದ್ದು 5 ಜನರಿಗೆ ಗಾಯ

ಪುತ್ತೂರು ಜುಲೈ 17: ಮನೆ ಮೇಲೆ ಮರ ಬಿದ್ದು ಐವರಿಗೆ ಗಾಯಗಳಾದ ಘಟನೆ ಸುಳ್ಯದಲ್ಲಿ ನಡೆದಿದೆ, ಸುಳ್ಯಪದವಿನ ಕೆಳಗಿನ ಕನ್ನಡ್ಕ ಎಂಬಲ್ಲಿ ಈ ಘಟನೆ ನಡೆದಿದೆ. ಇಂದು ಮುಂಜಾನೆ ಬೀಸಿದ ಭಾರಿ ಗಾಳಿಗೆ ಮನೆ ಹತ್ತಿರ ಇದ್ದ ಮರವೊಂದು ಕನ್ನಡ್ಕದ ಮಾಂಕು ಎಂಬವರಿಗೆ ಸೇರಿದ ಮನೆ ಮೇಲೆ ಬಿದ್ದಿದೆ.

ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿದ್ದ, ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಐವರ ಗಾಯಗೊಂಡಿದ್ದು ಗಾಯಗೊಂಡವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂಜಾನೆಯಿಂದಲೇ ಭಾರಿ ಮಳೆ ಸುರಿಯುತ್ತಿದ್ದ, ಮಳೆ ಜೊತೆ ಜೋರಾಗಿ ಗಾಳಿ ಕೂಡ ಬೀಸುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

Facebook Comments

comments