Connect with us

LATEST NEWS

ರೈಲ್ವೆ ಇಲಾಖೆ ವಿಶೇಷ ಸ್ವಚ್ಚತಾ ಅಭಿಯಾನ – ಗುಜರಿ ಮೂಲಕ ಬಂತು 66 ಲಕ್ಷಕ್ಕೂ ಅಧಿಕ ಆದಾಯ

ಮುಂಬೈ ಅಕ್ಟೋಬರ್ 16: ಭಾರತೀಯ ರೈಲ್ವೇ ಸಚಿವಾಲಯವು ತನ್ನ ವಿಶೇಷ ಸ್ವಚ್ಛತಾ ಅಭಿಯಾನ 3.0 ರ ಮೊದಲ 13 ದಿನಗಳಲ್ಲಿ ಕಚೇರಿಯ ಅವಶೇಷಗಳನ್ನು ವಿಲೇವಾರಿ ಮಾಡುವ ಮೂಲಕ 66 ಲಕ್ಷಕ್ಕೂ ಹೆಚ್ಚು ಆದಾಯವನ್ನು ಗಳಿಸಿದೆ ಎಂದು ತಿಳಿಸಿದೆ.


ಈ ವಿಶೇಷ ಸ್ವಚ್ಛತಾ ಅಭಿಯಾನ 3.0 ಅಕ್ಟೋಬರ್ 1 ರಂದು ಪ್ರಾರಂಭವಾಯಿತು ಮತ್ತು ಅಕ್ಟೋಬರ್ 31 ರವರೆಗೆ ನಡೆಯಲಿದೆ. ರೈಲ್ವೇಯ ವಲಯ ಪ್ರಧಾನ ಕಛೇರಿ, ವಿಭಾಗೀಯ ಕಚೇರಿಗಳು, ಉತ್ಪಾದನಾ ಘಟಕಗಳು, ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ, ತರಬೇತಿ ಸಂಸ್ಥೆಗಳು ಮತ್ತು 7,000 ಕ್ಕೂ ಹೆಚ್ಚು ನಿಲ್ದಾಣಗಳು ಅಭಿಯಾನದ ಅಡಿಯಲ್ಲಿ ಬರುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 31 ರವರೆಗೆ 10,722 ಸ್ವಚ್ಛತಾ ಅಭಿಯಾನಗಳನ್ನು ನಡೆಸುವ ಗುರಿಯನ್ನು ರೈಲ್ವೆ ಹೊಂದಿದೆ. ಈ ಅಭಿಯಾನದ ಭಾಗವಾಗಿ, ಕಚೇರಿಗಳು ಮತ್ತು ಕೆಲಸದ ಸ್ಥಳದಲ್ಲಿ ಸ್ಕ್ರ್ಯಾಪ್ ವಿಲೇವಾರಿ ಮೇಲೆ ವಿಶೇಷ ಗಮನ ಹರಿಸಲಾಗಿದೆ ಮತ್ತು 3,18,504 ಚದರ ಅಡಿ ಜಾಗವನ್ನು ಮುಕ್ತಗೊಳಿಸುವ ಗುರಿಯನ್ನು ನಿಗದಿಪಡಿಸಲಾಗಿದೆ ರೈಲ್ವೆ ಇಲಾಖೆ ತಿಳಿಸಿದೆ.

ಈಗಾಗಲೇ ಅಕ್ಟೋಬರ್ 13 ರವರೆಗಿನ ಅಭಿಯಾನದಲ್ಲಿ 66 ಲಕ್ಷಕ್ಕೂ ಅಧಿಕ ಆದಾಯವನ್ನು ಸ್ಕ್ರ್ಯಾಪ್ ಮೂಲಕ ರೈಲ್ವೆ ಇಲಾಖೆ ತನ್ನದಾಗಿಸಿದೆ. ಈ ಗುರಿಗಳನ್ನು ಸಾಧಿಸಲು, ಅಕ್ಟೋಬರ್ 13, 2023 ರವರೆಗೆ ಅಭಿಯಾನದ ಸಮಯದಲ್ಲಿ 5,297 ಕ್ಕೂ ಹೆಚ್ಚು ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಗಿದೆ. ಅಭಿಯಾನದ ಸಮಯದಲ್ಲಿ 1.02 ಲಕ್ಷಕ್ಕೂ ಹೆಚ್ಚು ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲಾಗಿದೆ” ಎಂದು ಅದು ಹೇಳಿದೆ. ಅಲ್ಲದೆ ಈ ಈ ಅಭಿಯಾನದ ಸಮಯದಲ್ಲಿ3,97,619 ಚದರ ಅಡಿ ಜಾಗವನ್ನು ಮುಕ್ತಗೊಳಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *