LATEST NEWS
ಕಲ್ಲಡ್ಕ ಪ್ರಭಾಕರ ಭಟ್ ತಾಕತ್ ಇದ್ದರೆ ನನ್ನ ವಿರುದ್ಧ ಸ್ಪರ್ಧಿಸಲಿ : ಸಚಿವ ರಮಾನಾಥ ರೈ
ಕಲ್ಲಡ್ಕ ಪ್ರಭಾಕರ ಭಟ್ ತಾಕತ್ ಇದ್ದರೆ ನನ್ನ ವಿರುದ್ಧ ಸ್ಪರ್ಧಿಸಲಿ : ಸಚಿವ ರಮಾನಾಥ ರೈ
ಕೊಡಗು ಡಿಸೆಂಬರ್ 15: ತಾಕತ್ತು ಇದ್ದರೆ ಕಲ್ಲಡ್ಕ ಪ್ರಭಾಕರ ಭಟ್ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿ ಎಂದು ಅರಣ್ಯ ಸಚಿವ ರಮಾನಾಥ ರೈ ಸವಾಲು ಹಾಕಿದ್ದಾರೆ.
ಕೊಡಗಿನ ವಿರಾಜಪೇಟೆಯಲ್ಲಿ ಮಾದ್ಯಮ ಪ್ರತಿನಿಧಿಗಳೂಂದಿಗೆ ಮಾತನಾಡಿದ ಅವರು ಪ್ರಭಾಕರ ಭಟ್ ನನ್ನ ಮುಂದೆ ಸ್ಪರ್ಧಿಸಿದರೆ ಅವರಿಗೆ ಡೆಪಾಸಿಟ್ ಕೂಡ ಸಿಗಲ್ಲ ಎಂದು ವ್ಯಂಗ್ಯ ವಾಡಿದ್ದಾರೆ.
ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ತಾಕತ್ತು ಇದ್ದರೆ ನನ್ನ ವಿರುದ್ಧ ನಿಲ್ಲಲಿ ಎಂದು ಆಕ್ರೋಶದಿಂದ ಸವಾಲು ಹಾಕಿದರು.
ರಮಾನಾಥ ರೈ ಪ್ರಭಾಕರ ಭಟ್ ಅವರ ಶಾಲೆಗೆ ಅನುದಾನ ಸ್ಥಗಿತ ಸರಿಯಾಗಿರುವುದನ್ನು ಸಮರ್ಥಿ ಕೊಂಡ ಅವರು ಕಲ್ಲಡ್ಕ ಪ್ರಭಾಕರ ಭಟ್ ಶಾಲೆಯ ವಿಚಾರದ ಚರ್ಚೆ ಅರ್ಥಹೀನ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸರ್ಕಾರ ಬಿಸಿಯೂಟ ನೀಡುತ್ತದೆ.ಕಲ್ಲಡ್ಕ ಪ್ರಭಾಕರ ಭಟ್ ಅವರ ಶಾಲೆ ಅನುದಾನಿತ ಶಾಲೆ ಅದಕ್ಕೆ ಬಿಸಿಯೂಟ ಸಿಗುತ್ತದೆ.
ಆದರೆ ಅವರಿಗೆ ಬಿಸಿಯೂಟ ಬೇಡ, ಹಣ ಬೇಕು, ಅದೂ ದೇವಸ್ಥಾನ ಹಣ ಎಂದು ಅವರು ಆರೋಪಿಸಿದರು. ನಾನು ಹೇಳುತ್ತೇನೆ ದೇವಾಲಯದ ಹಣ ದೇವಾಲಯಕ್ಕೆ ಮಾತ್ರ ಬಳಕೆಯಾಗಬೇಕು.
ದೇವಸ್ಥಾನದ ಹಣ ಶಾಲೆಗೆ ಬಳಸಿಕೊಂಡಿರುವುದು ಅಧಿಕಾರ ದುರುಪಯೋಗವಾಗುತ್ತದೆ.ಸರ್ಕಾರ ಶಾಲೆಗೆ ಹೋಗುವ ಹಣಕ್ಕೆ ಕಡಿವಾಣ ಹಾಕಿರುವುದು ಸರಿ ಎಂದು ಅವರು ಸರಕಾರದ ಕ್ರಮವನ್ನು ಸಮರ್ಥಿಸಿದರು.
ತಾವು ನಡೆಸಿದ ಸಾಮರಸ್ಯ ಯಾತ್ರೆ ಯಶಸ್ವಿ ಕಾರ್ಯಕ್ರಮ ಎಂದು ಹೇಳಿಸ ಅವರು ಸೋನಿಯಾ ಗಾಂಧಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ವಿಚಾರದ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದರು.
ಗುಜರಾತ್ ಚುನಾವಣೆಯ ಎಕ್ಸಿಟ್ ಪೋಲ್ ಬಿಜೆಪಿ ಪರ ಇರುವ ಕುರಿತು ಮಾತನಾಡಿದ ಅವರು ಕಾಂಗ್ರೆಸ್ ವಿರೋಧಿ ಅಲೆ ಇದ್ದ ಗುಜರಾತ್ ನಲ್ಲಿ ಕಾಂಗ್ರೆಸ್ ಸುಧಾರಣೆ ಕಾಣುತ್ತಿದೆ.
ಇನ್ನೂ ಮತ ಎಣಿಕೆ ಕಾರ್ಯ ಬಾಕಿ ಇದೆ, ಚುನಾವಣೆ ಫಲಿತಾಂಶ ಕಾದು ನೋಡೋಣ ಎಂದು ಅವರು ಹೇಳಿದರು.