LATEST NEWS
ಕರಾವಳಿಯಲ್ಲಿ ರಾಹುಲ್ ಅಲೆ ಆರಂಭ : ಸಚಿವ ಯು.ಟಿ. ಖಾದರ್
ಕರಾವಳಿಯಲ್ಲಿ ರಾಹುಲ್ ಅಲೆ ಆರಂಭ : ಸಚಿವ ಯು.ಟಿ. ಖಾದರ್
ಮಂಗಳೂರು, ಮಾರ್ಚ್ 15 : ಕರಾವಳಿಯಲ್ಲಿ ರಾಹುಲ್ ಗಾಂಧಿ ಅಲೆ ಆರಂಭವಾಗಿದೆ.
ಈ ಅಲೆಯಲ್ಲಿ ಯಾರು ಕೊಚ್ಚಿ ಹೋಗುತ್ತಾರೋ ಗೊತ್ತಿಲ್ಲ ಎಂದು ಆಹಾರ ಸಚಿವರಾದ ಯು ಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖಾದರ್ ಮಾರ್ಚ್ 20 ಕ್ಕೆ ರಾಹುಲ್ ಗಾಂಧಿ ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಹುಲ್ ಗಾಂಧಿ ಅಲೆ ದಕ್ಷಿಣ ಕನ್ನಡ ಜಿಲ್ಲೆಯ ಲ್ಲಿ ಆರಂಭವಾಗಿದೆ.
ಇದರಲ್ಲಿ ಯಾರು ಕೊಚ್ಚಿ ಹೋಗುತ್ತಾರೋ ಗೊತ್ತಿಲ್ಲ ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಮಾಡಲಿರುವ ರಾಹುಲ್ ಗಾಂಧಿ ಅವರು ಆನೇಕ ಧಾರ್ಮಿಕ ಕೇಂದ್ರ ಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದರು.
ಮಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶದಲ್ಲಿ ಜಿಲ್ಲೆಯಿಂದ 75 ಸಾವಿರ ಕಾರ್ಕರ್ತರು ಪಾಲ್ಗೊಳ್ಳಲಿದ್ದಾರೆ. ತಮ್ಮ ಉಳ್ಳಾಲ ಕ್ಷೇತ್ರದಿಂದ ಸುಮಾರು 15 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಎಂದರು.
ಹೋಬಳಿ ಮಟ್ಟದಲ್ಲಿ ಇಂದಿರಾ ಕ್ಯಾಂಟಿನ್ :
ರಾಜ್ಯದಲ್ಲೇ ಪ್ರಥಮವಾಗಿ ಹೊಬಳಿ ಮಟ್ಟದಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲು ತೀರ್ಮಾನಿಸಲಾಗಿದೆ.
ಇದೇ ಮಾರ್ಚ್ 23 ರಿಂದ ತನ್ನದೇ ಉಳ್ಳಾಲ ಕ್ಷೇತ್ರದಲ್ಲಿ ಇದು ಕಾರ್ಯಾರಂಭಗೊಳ್ಳಲಿದೆ ಎಂದು ಸಚಿವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿರ ಗಾಂಧಿ ಕ್ಯಾಂಟಿನ್ ಸಮಯವನ್ನು ಬದಲಾವಣೆಗೆ ಚಿಂತನೆ ನಡೆಸಲಾಗಿದ್ದು, ಬೆಳಿಗ್ಗೆ 8 ಗಂಟೆಯ ಬದಲಿಗೆ 7 ಗಂಟೆಗೆ ಮಾಡಲು ನಿಶ್ಚಯಿಸಲಾಗಿದೆ.
ಈ ಬಗ್ಗೆ ಜಿಲ್ಲಾಡಳಿತದ ಸಭೆಯಲ್ಲಿ ಮಾತುಕತೆ ನಡೆಸಲಾಗಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
You must be logged in to post a comment Login