DAKSHINA KANNADA
ಮಂಗಳೂರಿನಲ್ಲಿ ಐಸ್ ಕ್ರೀಮ್ ಸವಿದ ರಾಹುಲ್ ಗಾಂಧಿ
ಮಂಗಳೂರು, ಎಪ್ರಿಲ್ 28: ಕರ್ನಾಟಕ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದಿರುವ ರಾಹುಲ್ ಗಾಂಧಿ ಮಂಗಳೂರಿನ ಪ್ರಖ್ಯಾತ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಐಸ್ ಕ್ರೀಮ್ ಸವಿದಿದ್ದಾರೆ.
ಮಂಗಳೂರಿನ ಲಾಲ್ ಬಾಗ್ ನಲ್ಲಿರುವ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ಗೆ ಕಾಂಗ್ರೆಸ್ ಮುಖಂಡರೊಂದಿಗೆ ಆಗಮಿಸಿದ ರಾಹುಲ್ ಗಾಂಧಿ ಐಸ್ ಕ್ರೀಂ ಸವಿದಿದ್ದಾರೆ. ಈ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ , ಕೆ ಸಿ ವೇಣುಗೋಪಾಲ್, ನಲ್ಪಾಡ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಗೆ ಸಾಥ್ ನೀಡಿದ್ದಾರೆ.
ಬಿಗಿ ಭದ್ರತೆಯೊಂದಿಗೆ ಐಸ್ ಕ್ರೀಮ್ ಪಾರ್ಲರ್ ಗೆ ಆಗಮಿಸಿದ್ದ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಜನ ಸೇರಿದ್ದು, ರಾಹುಲ್ ಗಾಂಧಿಯೊಂದಿಗೆ ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಬಳಿಕ ರಾಹುಲ್ ಗಾಂಧಿ ಜನರ ಸೆಲ್ಫಿಗೆ ಸಹಕರಿಸಿದ್ದಾರೆ.
You must be logged in to post a comment Login