LATEST NEWS
ಪ್ರಧಾನಿ ಮೋದಿಯಿಂದ ಹಿರಿಯರಿಗೆ ಅವಮಾನ- ರಾಹುಲ್ ಗಾಂಧಿ
ಪ್ರಧಾನಿ ಮೋದಿಯಿಂದ ಹಿರಿಯರಿಗೆ ಅವಮಾನ- ರಾಹುಲ್ ಗಾಂಧಿ
ಉಡುಪಿ ಮಾರ್ಚ್ 20: ಪ್ರಧಾನಿ ನರೇಂದ್ರ ಮೋದಿ ಹೋದಲ್ಲಿ ಹೇಳ್ತಾರೆ 70ವರ್ಷದಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುವ ಮೂಲಕ ತನ್ನ ತಂದೆ ತಾಯಿ, ಯುವಕರು, ಬಡವರ ಅವಮಾನ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇಂದು ಕಾಪುವಿನಲ್ಲಿ ಜನಾಶೀರ್ವಾದ ಯಾತ್ರೆಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ 70 ದ ವರ್ಷದಿಂದ ಏನೂ ಮಾಡಿಲ್ಲ ಎಂದು ಪ್ರಧಾನಿ ಮೋದಿ ಹೀಗೆ ಹೇಳಿಕೊಂಡು ತಿರುಗಾಡ್ತಾ ಇದ್ದಾರೆ. ಇದು ನಿಮೆಲ್ಲರ ಹಿರಿಯರಿಗೆ ಮಾಡಿದ ಅವಮಾನ. ಮೋದಿ ಹಿರಿಯರಿಗೆ ಗೌರವ ಕೊಡುವವರಲ್ಲ ಎಂದು ಆರೋಪಿಸಿದರು. ದೇಶದಲ್ಲಿ ಜನ 70 ವರ್ಷ ಬದುಕಲಿಲ್ವೇ? ವ್ಯಾಪಾರ , ವ್ಯವಹಾರ ನಡೆಸಲಿಲ್ಲವೇ ಎಂದು ಪ್ರಶ್ನಿಸಿದರು. ದೇಶದ ಪ್ರಗತಿ ಒಬ್ಬನಿಂದ ಅಸಾಧ್ಯ ಎಲ್ಲರೂ ಜೊತೆಯಾಗಿ ಸಾಗಿದರೆ ಮಾತ್ರ ದೇಶಾಭಿವೃದ್ಧಿ ಸಾಧ್ಯ ಎಂದು ಹೇಳಿದರು.
ನಮ್ಮ ದೇಶ ಮುಂದೆ ಹೋಗಿದ್ರೆ ದೇಶದ ಜನರ ಶಕ್ತಿ ಮತ್ತು ಶ್ರಮದಿಂದ ಆಗಿದೆ, ಭಾರತ ಇತರ ದೊಡ್ಡ ರಾಷ್ಟ್ರದ ಮುಂದೆ ನಿಂತಿದೆ ಅಂದ್ರೆ ನಾಲ್ಕು ವರ್ಷದಿಂದ ಅಲ್ಲ ಸಾವಿರಾರು ವರ್ಷದ ಹಿಂದಿನ ರಕ್ತ ಮತ್ತು ಬೆವರಿನ ಪರಿಶ್ರಮ ಇದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ದುಡಿದ 70ವರ್ಷದ ಪರಿಶ್ರಮಕ್ಕೆ ಅವಮಾನ ಮಾಡಬಾರದು ಎಂದು ಹೇಳಿದ ಅವರು ರಾಷ್ಟ್ರದ 120 ಕೋಟಿ ಜನ ಮನಸ್ಸು ಮಾಡಿದರೆ ದೇಶ ಪ್ರಗತಿಪಥದಲ್ಲಿ ಸಾಗುತ್ತದೆ ಎಂದು ಹೇಳಿದರು.
ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಬಸವಣ್ಣನ್ನು ಹೋಗುಳುತ್ತಾರೆ. ಆದರೆ ಬಡವ ಬಲ್ಲಿದರ ಬಗ್ಗೆ ಮೋದಿ ಗೆ ಕಾಳಜಿ ಇಲ್ಲ, 15 ಲಕ್ಷ ಬೇಡ 10 ರುಪಾಯಿ ಹಾಕಿ ಮೋದಿಜೀ ನೀವು ನುಡಿದಂತೆ ನಡೆಯಿರಿ ಎಂದು ಹೇಳಿದರು.