LATEST NEWS
ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿರುವ ರಾಹುಲ್ ಗಾಂಧಿ ಕುರಿತ ವಿಚಾರ ಯಾವುದು ?
ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿರುವ ರಾಹುಲ್ ಗಾಂಧಿ ಕುರಿತ ವಿಚಾರ ಯಾವುದು ?
ಮಂಗಳೂರು ಮಾರ್ಚ್ 20: ಕರಾವಳಿಯ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕುರಿತು ವಿಚಾರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಲ್ಲಿದೆ. ಅದೇ ರಾಹುಲ್ ಗಾಂಧಿ ಮೀನು ತಿಂದು ದೇವಸ್ಥಾನಕ್ಕೆ ಹೋಗ್ತಾರಾ ಎನ್ನುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಲ್ಲಿದೆ.
ಇಂದು ಬೆಳಿಗ್ಗೆ ಮಂಗಳೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ನಂತರ ಉಡುಪಿಯ ಕಾಪು ವಿಧಾನ ಸಭಾ ಕ್ಷೇತ್ರದ ತೆಂಕ ಎರ್ಮಾಳ್ ಕ್ಷೇತ್ರಕ್ಕೆ ತೆರಳಿದ್ದರು. ಅಲ್ಲಿ ಕಡಲ ಕಿನಾರೆಗೆ ತೆರಳಿದ ರಾಹುಲ್ ಗಾಂಧಿ ಮೀನುಗಾರರ ಮನೆಯಲ್ಲಿ ನೀರು ದೋಸೆ ಜೊತೆ ಫಿಶ್ ಕರಿ ಸವಿದರು. ಅವರೊಂದಿಗೆ ಡಾ. ಪರಮೇಶ್ವರ್ , ಕೆ.ಸಿ ವೇಣುಗೋಪಾಲ ಕೂಡ ಮೀನಿನ ಜೊತೆ ನೀರು ದೋಸೆಯನ್ನು ಸವಿದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪೋಟೋಗಳು ಕಾಂಗ್ರೇಸ್ ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಅಪ್ ಲೋಡ್ ಆಗಿತ್ತು.
ರಾಹುಲ್ ಗಾಂಧಿ ಅವರ ಪ್ರವಾಸದ ವೇಳಾಪಟ್ಟಿ ಪ್ರಕಾರ ಇಂದು ಸಂಜೆ ರಾಹುಲ್ ಗಾಂಧಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು. ಆದರೆ ಈಗ ಮೀನು ತಿಂದು ರಾಹುಲ್ ಗಾಂಧಿ ದೇವಸ್ಥಾನ ಪ್ರವೇಶ ಮಾಡ್ತಾರಾ? ಎಂಬ ಪ್ರಶ್ನೆ ವ್ಯಕ್ತವಾಗಿದೆ.
ಇಂದು ಸಂಜೆ ಮಂಗಳೂರಿಗೆ ಭೇಟಿ ನೀಡಲಿರುವ ರಾಹುಲ್ ಗಾಂಧಿ ಬೃಹತ್ ಜನಾಶೀರ್ವಾದ ಸಮಾವೇಶದ ಬಳಿಕ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೀನು ತಿಂದು ರಾಹುಲ್ ಗಾಂಧಿ ದೇವಾಲಯಕ್ಕೆ ತೆರಳುತ್ತಾರಾ ಎಂಬ ಕುತೂಹಲ ಹುಟ್ಟುಹಾಕಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ.
ಈ ನಡುವೆ ದೇವಾಲಯಕ್ಕೆ ತೆರಳುವ ಮೊದಲು ಸ್ನಾನ ಮಾಡಿ ಹೋಗಲು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.
You must be logged in to post a comment Login