LATEST NEWS
ಶಾಲಾ ಮಕ್ಕಳ ಜೊತೆ ಬೆರೆತ ರಾಹುಲ್ ಗಾಂಧಿ
ಶಾಲಾ ಮಕ್ಕಳ ಜೊತೆ ಬೆರೆತ ರಾಹುಲ್ ಗಾಂಧಿ
ಉಡುಪಿ ಮಾರ್ಚ್ 20: ಕರಾವಳಿಯಲ್ಲಿ ನಡೆಯುತ್ತಿರುವ ಕಾಂಗ್ರೇಸ್ ನ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಲು ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಉಡುಪಿ ಜಿಲ್ಲೆಯ ಕಾಪು ವಿಧಾ ಸಭಾ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ ರಾಹುಲ್ ಗಾಂಧಿ ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಪಡುಬಿದ್ರೆ ಸಮೀಪದ ತೆಂಕ ಎರ್ಮಾಳ್ ಸರ್ಕಾರಿ ಸಂಯುಕ್ತ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‌ಗೆ ಬಂದಿಳಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯನ್ನು ಕೆಪಿಸಿಸಿ ಅದ್ಯಕ್ಷ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಕಾಪು ವಿಧಾನಸಭಾ ಶಾಸಕ ವಿನಯ್‌ಕುಮಾರ್ ಸೊರಕೆ ಮುಂತಾದ ಮುಖಂಡರು ಬರಮಾಡಿಕೊಂಡರು.
ಶಾಲೆಯ ಮೈದಾನದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ ನಲ್ಲಿ ಇಳಿದ ಬಳಿಕ ಕ ರಾಹುಲ್ ಗಾಂಧಿ ನೇರವಾಗಿ ಸರ್ಕಾರಿ ಸಂಯುಕ್ತ ಶಾಲೆಗೆ ಓಡೋಡಿ ಬಂದು ಮಕ್ಕಳ ಜೊತೆ ಕೆಲ ಹೊತ್ತು ಕಳೆದರು, ಎಲ್ಲಾ ಮಕ್ಕಳ ಕೈಕುಲುಕಿ ಶುಭಾಶಯ ತಿಳಿಸಿದರು. ರಾಹುಲ್ ಗಾಂಧಿ ಅವರ ಕೈಕುಲುಕಿ ಶಾಲಾ ಮಕ್ಕಳು ಕೂಡ ಸಂಭ್ರಮಿಸಿದರು. ನಂತರ ತೆಂಕ ಎರ್ಮಾಳಿನಲ್ಲಿ ನೂತನಾಗಿ ನಿರ್ಮಿಸಲಾಗಿದ್ದ ರಾಜೀವ ಗಾಂಧಿ ಪಾಲಿಟಿಕಲ್ ಅಕಾಡೆಮಿಯನ್ನು ಉದ್ಘಾಟಿಸಿದರು. ಬಳಿಕ ಸೇವಾದಳದ ಮುಖಂಡರೊಂದಿಗೆ ಸಂವಾದ ನಡೆಸಿದರು.
You must be logged in to post a comment Login