Connect with us

National

ಜುಲೈ ಕೊನೆಯ ವಾರದಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳ್ಳಲಿದೆ ಶಸ್ತಾಸ್ತ್ರ ಹೊತ್ತ ರಾಫೇಲ್….

ನವದೆಹಲಿ, ಜೂನ್ 29: ಚೀನಾದ ನಿರಂತರ ಗಡಿ ತಂಟೆಯ ನಡುವೆಯೇ ಭಾರತೀಯ ವಾಯುಸೇನೆಗೆ ಅತ್ಯಾಧುನಿಕ ಶಸ್ತಾಸ್ತ್ರ ಹೊತ್ತ ಆರು ರಾಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಲಿದೆ. ಪಾಕಿಸ್ತಾನ ಹಾಗೂ ಚೀನಾ ಯುದ್ಧ ವಿಮಾನಗಳಿಗೆ ಸಡ್ಡು ಹೊಡೆಯಬಲ್ಲ ಈ ರಾಫೇಲ್ ಯುದ್ಧ ವಿಮಾನ ಭಾರತೀಯ ವಾಯುಸೇನೆಯ ಬಲವನ್ನು ಇಮ್ಮಡಿಗೊಳಿಸಲಿದೆ.

ವಾಯುನೆಲೆಯಲ್ಲಿ ಸಿಡಿತಲೆಗಳನ್ನು ಸಿಡಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ಯುದ್ಧ ವಿಮಾನಗಳು 150 ಕಿಲೋ ಮೀಟರ್ ದೂರದವರೆಗೆ ಮಿಸೈಲ್ ಗಳನ್ನು ಸಿಡಿಸುವ ಸಾಮರ್ಥ್ಯವನ್ನು ಹೊಂದಿದೆ. ರಾಫೇಲ್ ಯುದ್ಧ ವಿಮಾನಗಳನ್ನು ಹಾರಿಸಿವ ತರಭೇತಿಯನ್ನು ಭಾರತೀಯ ಪೈಲಟ್ ಗಳು ಈಗಾಗಲೇ ಪ್ರಾನ್ಸ್ ನಲ್ಲಿ ಪಡೆಯುತ್ತಿದ್ದು, ಜುಲೈ ಕೊನೆಗೆ ಆರು ಯುದ್ಧ ವಿಮಾನಗಳು ಭಾರತೀಯ ವಾಯುಸೇನೆ ಸೇರ್ಪಡೆಗೊಳ್ಳಲಿದೆ.

ಆರು ವಿಮಾನಗಳು ಸಂಪೂರ್ಣ ಸಜ್ಜಾದ ರೀತಿಯಲ್ಲಿ ಬರಲಿದ್ದು, ಕೆಲವೇ ದಿನಗಳಲ್ಲಿ ಅದನ್ನು ಭಾರತೀಯ ಸೇನೆಗೆ ತಕ್ಕದಾದ ರೀತಿಯಲ್ಲಿ ಸಜ್ಜುಗೊಳಿಸಲಾಗುತ್ತದೆ. ಈ ಹಿಂದಿನ ಯೋಜನೆಯ ಪ್ರಕಾರ ನಾಲ್ಕು ರಾಫೇಲ್ ಯುದ್ಧ ವಿಮಾನಗಳು ಮೊದಲ ಹಂತದಲ್ಲಿ ಬರಲಿದ್ದು, ಇವುಗಳಲ್ಲಿ ಮೂರು ವಿಮಾನಗಳು ಎರಡು ಸೀಟುಗಳನ್ನು ಹೊಂದಿ ತರಭೇತಿ ನೀಡುವ ಯುದ್ಧ ವಿಮಾನಗಳ ಮಾದರಿಯಲ್ಲಿರಲಿದ್ದವು. ಈ ಹಿನ್ನಲೆಯಲ್ಲಿ ಭಾರತೀಯ ವಾಯುಸೇನೆಯ ಅಂಬಾಲ ವಾಯುನೆಲೆ ಹಾಗೂ ಪಶ್ಚಿಮ ಬಂಗಾಲದ ಹಶಿಮರ ವಾಯುನೆಲೆಯನ್ನು ರಾಫೇಲ್ ತರಭೇತಿಗಾಗಿ ಗುರುತಿಸಲಾಗಿತ್ತು.

ಮೊದಲ ಹಂತಕ್ಕೆ ಬರುವ ವಿಮಾನಗಳ ಪೈಲಟ್ ಗಳಿಗೆ ತರಭೇತಿಯು ಪೂರ್ಣಗೊಂಡಿದ್ದು, ಕೊರೊನಾ ಲಾಕ್ ಡೌನ್ ಎರಡೂ ದೇಶಗಳಲ್ಲಿ ಪೂರ್ಣಗೊಂಡ ಬಳಿಕ ಇನ್ನೊಂದು ತಂಡಕ್ಕೆ ತರಭೇತಿಯು ಪ್ರಾನ್ಸ್ ನಲ್ಲಿ ನಡೆಯಲಿದೆ. ಜುಲೈ ತಿಂಗಳ ಮದ್ಯಂತರದಲ್ಲಿ ರಾಫೇಲ್ ನ ಭಾರತ ತಲುಪಲಿದ್ದು, ಮೊದಲ ಹಾರಾಟವನ್ನು ಭಾರತೀಯ ವಾಯಸೇನೆಯ 17 ನೇ ಗೋಲ್ಡನ್ ಆ್ಯರೋ ಸ್ಕ್ವಾರ್ಡನ್ ನ ವಿಂಗ್ ಕಮಾಂಡರ್ ಹಾಗೂ ಪ್ರಾನ್ಸ್ ನ ಪೈಲೆಟ್ ಜಂಟಿಯಾಗಿ ಉಡಾಯಿಸಲಿದ್ದಾರೆ.

ಪ್ರಾನ್ಸ್ ನಿಂದ ಭಾರತಕ್ಕೆ ಹೊರಡುವ ಈ ಯುದ್ಧ ವಿಮಾನಗಳಿಗೆ ಮಧ್ಯಪ್ರಾಚ್ಯದ ವರೆಗಿನ ಹಾರಾಟದ ಸಂದರ್ಭದಲ್ಲಿ ಇಂಧನ ತುಂಬಿಸುವ ಕಾರ್ಯ ನಡೆಯಬೇಕಿದ್ದು, ಇದನ್ನು ಪ್ರಾನ್ಸ್ ವಾಯುಸೇನೆ ನಿರ್ವಹಿಸಲಿದೆ. ಮಧ್ಯಪ್ರಾಚ್ಯದಿಂದ ಭಾರತ ಮಾರ್ಗ ಮಧ್ಯೆಯೂ ಹಾರಾಟದ ಸಂದರ್ಭದಲ್ಲಿ ಇಂಧನ ತುಂಬಿಸುವ ಅಗತ್ಯವಿದ್ದು, ಇದನ್ನು ಭಾರತೀಯ ಸೇನೆಯ ಇಂಧನ ವಾಹಕ ನಡೆಸಲಿದೆ.

ಪ್ರಾನ್ಸ್ ನಿಂದ ನೇರವಾಗಿ ಭಾರತಕ್ಕೆ ಯುದ್ಧ ವಿಮಾನದ ಹಾರಾಟ ಸಾಧ್ಯವಿದ್ದರೂ, ನಿರಂತರ ಹಾರಾಟದಿಂದ ಪೈಲೆಟ್ ಗಳಿಗೆ ಒತ್ತಡ ಆಗದಿರಲಿ ಎನ್ನುವ ಕಾರಣಕ್ಕೆ ಈ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಭಾರತ ಮತ್ತು ಪ್ರಾನ್ಸ್ ನಡುವೆ ಅಂದಾಜು 60 ಸಾವಿರ ಕೋಟಿಗೂ ಹೆಚ್ಚಿನ ಒಪ್ಪಂದದ ಪ್ರಕಾರ 36 ಶಸ್ತ್ರಸಜ್ಜಿತ ಯುದ್ಧ ವಿಮಾನಗಳು ಭಾರತಕ್ಕೆ ಪೂರೈಸಲಾಗುತ್ತಿದೆ.

ಭಾರತೀಯ ವಾಯುಸೇನೆಯ ಸಾಮರ್ಥ್ಯ ಹೆಚ್ಚಿಸುವ ಉದ್ಧೇಶದಿಂದ 2016 ರಲ್ಲಿ ಕೇಂದ್ರ ಸರಕಾರ ಈ ಒಪ್ಪಂದ ಮಾಡಿದ್ದು, ಮೊದಲ ಹಂತದ ಆರು ರಾಫೇಲ್ ವಿಮಾನಗಳ ಸೇರ್ಪಡೆ ಭಾರತೀಯ ಸೇನೆಗೆ ಆನೆ ಬಲ ನೀಡಿದರೆ, ಚೀನಾ ಮತ್ತು ಪಾಕಿಸ್ತಾನಕ್ಕೆ ನೇರ ಎಚ್ಚರಿಕೆಯನ್ನೂ ನೀಡಲಿದೆ ಎಂದು ಅಂದಾಜಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *