Connect with us

    LATEST NEWS

    ಮಲೆಯಾಳಂ ಸಿನಿಮಾ ಸೆಟ್‌ಗಳಲ್ಲಿ ನಟಿಯರ ಕ್ಯಾರವಾನ್‌ಗಳಲ್ಲಿ ಹಿಡನ್ ಕ್ಯಾಮರಾ ಇಡಲಾಗುತ್ತಿತ್ತು – ಶಾಕಿಂಗ್ ವಿಚಾರ ಬಹಿರಂಗ ಪಡಿಸಿದ ಹಿರಿಯ ನಟಿ ರಾಧಿಕಾ

    ತಿರುವನಂತಪುರಂ ಅಗಸ್ಟ್ 31: ನ್ಯಾಯಮೂರ್ತಿ ಹೇಮಾ ಕಮಿಟಿ ವರದಿಯ ನಂತರ ಮಲೆಯಾಳಂ ಸಿನೆಮಾ ರಂಗದ ಪರಿಸ್ಥಿತಿ ಅಲ್ಲೋಲಕಲ್ಲೊಲವಾಗಿದೆ. ದಿನಗಳು ಕಳದಂತೆ ಹಲವು ನಟಿಯರು ತಾವು ಅನುಭವಿಸಿದ್ದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಆರೋಪ ಮಾಡುತ್ತಿದ್ದು, ಸದ್ಯ ಮಲೆಯಾಳಂನ ಸಿನೆಮಾ ರಂಗದ ನಟರು ನಿದ್ರೆ ಇಲ್ಲದ ದಿನಗಳನ್ನು ಕಳೆಯುತ್ತಿದ್ದಾರೆ.


    ಈ ನಡುವೆ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಮತ್ತೊಂದು ಶಾಕಿಂಗ್ ವಿಚಾರವನ್ನು ರಿವಿಲ್ ಮಾಡಿದ್ದು, ಸದ್ಯ ಮಲೆಯಾಳಂ ಸಿನೆಮಾ ರಂಗದಲ್ಲಿ ಬಿರುಗಾಳಿ ಎಬ್ಬಿಸಿದೆ. : ಮಲಯಾಳಂ ಚಿತ್ರಗಳ ಶೂಟಿಂಗ್ ಸೆಟ್‌ಗಳಲ್ಲಿನಟಿಯರ ಆಕ್ಷೇಪಾರ್ಹ ವೀಡಿಯೊಗಳನ್ನು ಕಾರವಾನ್‌ಗಳಲ್ಲಿ ಹಿಡನ್ ಕ್ಯಾಮೆರಾಗಳಲ್ಲಿ ರೆಕಾರ್ಡ್ ಮಾಡಲಾಗಿದೆ ಮತ್ತು ಅದನ್ನು ಪುರುಷ ನಟರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವೀಕ್ಷಿಸುವುದನ್ನು ನಾನು ಖುದ್ದಾಗಿ ನೋಡಿದ್ದೇನೆ ಎಂದು ದಕ್ಷಿಣ ಭಾರತದ ನಟಿ ರಾಧಿಕಾ ಶರತ್‌ಕುಮಾರ್ ಶನಿವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ನ್ಯಾಯಮೂರ್ತಿ ಕೆ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಬೆನ್ನಲ್ಲೇ ಮಲಯಾಳಂ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಸಂದರ್ಭ ಈ ವಿಚಾರ ತಿಳಿಸಿರುವ ರಾಧಿಕಾ ಶರತ್ ಕುಮಾರ್ ಹೇಮಾ ಸಮಿತಿಯ ವರದಿ ಏಕೆ ವಿಳಂಬವಾಯಿತು ಎಂದು ರಾಧಿಕಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಮತ್ತು ಮಲಯಾಳಂ ಉದ್ಯಮ ಮಾತ್ರವಲ್ಲದೆ ಇತರ ಉದ್ಯಮಗಳಲ್ಲಿಯೂ ಮಹಿಳೆಯರ ಮೇಲೆ ಕಿರುಕುಳ ಮತ್ತು ಕೆಟ್ಟದಾಗಿ ನಡೆಸಿಕೊಳ್ಳುವುದು ಮುಂದುವರಿದಿದೆ ಎಂದು ಸೂಚಿಸಿದರು. ಈ ಬಗ್ಗೆ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ರಾಧಿಕಾ ಶರತ್‌ಕುಮಾರ್, ಮಲಯಾಳಂ ಚಿತ್ರವೊಂದರ ಶೂಟಿಂಗ್ ಸೆಟ್‌ನಲ್ಲಿ ಪುರುಷರು ತಮ್ಮ ಕ್ಯಾರವಾನ್‌ಗಳಲ್ಲಿ ಹಿಡನ್ ಕ್ಯಾಮೆರಾ ಬಳಸಿ ಸೆರೆಹಿಡಿಯಲಾದ ನಟಿಯರ ಕ್ಲಿಪ್‌ಗಳನ್ನು ನೋಡುವುದನ್ನು ನೋಡಿದ್ದೇನೆ ಎಂದು ಹೇಳಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *