LATEST NEWS
ಬೆಳ್ಳಂಬೆಳಿಗ್ಗೆ ನಗರದಲ್ಲಿ ಕಾಣ ಸಿಕ್ಕ ಭಾರೀ ಗಾತ್ರ ಹೆಬ್ಬಾವು

ಮಂಗಳೂರು ಅಗಸ್ಟ್ 18: ಕಾಡಲ್ಲಿ ಇರಬೇಕಾದ ಕೆಲವು ಪ್ರಾಣಿಗಳು- ಜೀವಿಗಳು ಈಗ ನಗರ ಸುತ್ತಾಡಲಾಂಭಿಸಿವೆ.
ಇಂತಹುದೇ ಪ್ರಕರಣದಲ್ಲಿ ಭಾರೀ ಗಾತ್ರದ ಹೆಬ್ಬಾವೊಂದು ಇಂದು ಮುಂಜಾನೆ ಮಂಗಳೂರು ನಗರದಲ್ಲಿ ಕಾಣ ಸಿಕ್ಕಿದೆ. ಮಂಗಳೂರು ನಗರದ ಹಂಪನಕಟ್ಟೆಯ ಗಣಪತಿ ಶಾಲಾ ರಸ್ತೆಯಲ್ಲಿ ಇಂದು ಬೆಳಿಗ್ಗೆ ಬಂದ ಭಾರಿ ಗಾತ್ರದ ಹೆಬ್ಬಾವು ಬಂದಿದೆ.

ಆಹಾರ ಹುಡುಕಿ ಬಂದ ಹೆಬ್ಬಾವವನ್ನು ಸ್ಥಳೀಯರೇ ಭಾರಿ ಹರ ಸಾಹಸ ಪಟ್ಟು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.