Connect with us

DAKSHINA KANNADA

ಬಾವಿ ತಡೆಗೋಡೆಗೆ ಗುದ್ದಿದ ಬಿಸ್ಕೆಟ್ ಸರಬರಾಜಿನ ಲಾರಿ

ಪುತ್ತೂರು ಅಗಸ್ಟ್ 18: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶೇಕಮಲೆ ಅಟಲ್ ನಗರ ಎಂಬಲ್ಲಿ ಸೇತುವೆ ಬಳಿ ಇದ್ದ ಬಾವಿಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ನಡೆದಿದೆ.


ಬ್ರಿಟಾನಿಯ ಕಂಪೆನಿಯ ಬಿಸ್ಕೆಟ್ ಗಳು ತುಂಬಿರು ಲಾರಿ ಬೆಂಗಳೂರಿಂದ ಮಂಗಳೂರು ಕಡೆ ಹೊರಟಿದ್ದು, ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲೇ ಇದ್ದ ಬಾವಿಯ ಕಟ್ಟೆಗೆ ಡಿಕ್ಕಿ ಹೊಡೆದಿದೆ. ಬಾವಿಯ ಕಟ್ಟೆ ಸಂಪೂರ್ಣವಾಗಿ ಒಡೆದಿದೆ.
ಕಾಂಕ್ರೀಟ್ ಸ್ಲಾಬ್ ಗಳು ಒಡೆದು ಚೂರಾಗಿದೆ. ಬಾವಿಯ ಕಟ್ಡೆ ಪೂರ್ತಿ ಒಡೆದು ಇನ್ನೇನು ಲಾರಿ ಬಾವಿಯೊಳಗೆ ಬೀಳುವುದಿತ್ತು. ಆ ವೇಳೆ ಪವಾಡ ಎಂಬಂತೆ ಲಾರಿ ಯ ಪ್ಲೇಟ್ ತುಂಡಾಗಿ ಬಾವಿಯ ಕಟ್ಡೆಯ ಕಲ್ಲೊಂದರಲ್ಲಿ ಜಾಮ್ ಆಗಿದೆ. ಬಳಿಕ ಚಾಲಕ ಮತ್ತು ನಿರ್ವಾಹಕ ಲಾರಿಯಿಂದ ಇಳಿದಿದ್ದಾರೆ.