Connect with us

BANTWAL

ಪುತ್ತೂರು : ವಿಟ್ಲದಲ್ಲಿ ಸರಕಾರಿ ಜಾಗ ಕಬಳಿಸಿದ ವಕ್ಫ್ ಬೋರ್ಡ್‌, ಜಿಲ್ಲೆಯ ರೈತರಲ್ಲಿ ಮನೆ ಮಾಡಿದ ಆತಂಕ..!!

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕಸಬದ ಸರಕಾರಿ ಜಾಗವನ್ನು ಕಬಳಿಸಿದ ವಕ್ಫ್ ಬೋರ್ಡ್ ನಿಂದ ಜಿಲ್ಲೆಯ ರೈತರಲ್ಲಿ ಆತಂಕ ಮನೆ ಮಾಡಿದೆ. 

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕಸಬದ ಸರಕಾರಿ ಜಾಗವನ್ನು ಕಬಳಿಸಿದ ವಕ್ಫ್ ಬೋರ್ಡ್ ನಿಂದ ಜಿಲ್ಲೆಯ ರೈತರಲ್ಲಿ ಆತಂಕ ಮನೆ ಮಾಡಿದೆ.

ಜೊತೆಗೆ ಇದಕ್ಕೆ ಕುಮ್ಮನಕ್ಕು ನೀಡಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಗರಂ ಆಗಿದೆ. ವಿಟ್ಲ ಜುಮಾ ಮಸೀದಿ ಅಧ್ಯಕ್ಷರ‌ ಹೆಸರಿಗೆ 5.48 ಎಕ್ರೆ ಸರ್ಕಾರಿ ಜಮೀನು ನೊಂದಣಿ ಆಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ್ ಅವರು ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ. ಇದೊಂದು ಅತ್ಯಂತ ಅಘಾತಕಾರಿ ಬೆಳವಣಿಗೆಯಾಗಿದೆ. ಉತ್ತರ ಕರ್ನಾಟಕಕ್ಕೆ ಸೀಮಿತವಾಗಿದ್ದ ವಕ್ಫ್ ವಿವಾದ ಇದೀಗ ದಕ್ಷಿಣಕನ್ನಡ ಜಿಲ್ಲೆಗೂ ವಿಸ್ತರಿಸಿದೆ.

2018 ರಲ್ಲಿ ವಕ್ಫ್ ಬೋರ್ಡ್ ಸರಕಾರಿ ಭೂಮಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಇನ್ನು ಯಾವ ಯಾವ ಜಾಗವನ್ನು ತಮ್ಮ ವಶಕ್ಕೆ ಪಡೆದಿದೆ ಎನ್ನುವುದು ತಿಳಿಯುತ್ತಿಲ್ಲ ಆದ್ದರಿಂದ ರೈತರು ಕೂಡಲೇ ತಮ್ಮ ತಮ್ಮ ಪಹಣಿಪತ್ರಗಳನ್ನು ಪರಿಶೀಲಿಸುವುದು ಉತ್ತಮ ಎಂದು ಮನವಿ ಮಾಡಿದ್ದಾರೆ. ಜೊತೆಗೆ ಜಿಲ್ಲಾಡಳಿತ ಕೂಡಲೇ ಈ‌ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *