DAKSHINA KANNADA
ಪುತ್ತೂರು : ಇಂತಹ ಕರೆಗಳು ನಿಮಗೂ ಬರಬಹುದು, ಮೋಸ ಹೋಗದೆ ಜಾಗೃತೆಯಿಂದಿರಿ..!!
ಪೊಲೀಸ್ ಅಧಿಕಾರಿ, ಇನ್‌ಕಾಂ ಟ್ಯಾಕ್ಸ್, ಸಿಬಿಐ ಆಫೀಸರ್, ಕ್ರೈಂ ಬ್ರಾಂಚ್, ಸಿಮ್ ಕಾರ್ಡ್, ಹೀಗೇ ಅನೇಕರ ಹೆಸರು , ID card ಬಳಸಿ ಫೋನ್ ಕರೆಗಳು, ಬೇನಾಮಿ ಹುಡುಗಿಯ ಫೋಟೊ ಬಳಸಿ ವಿಡಿಯೋ ಕರೆಗಳು ಬರುತ್ತಿದ್ದು ಸಾರ್ವಜನಿಕರು ಎಚ್ಚರದಿಂದ ಇರಬೇಕಾಗಿದೆ. ತಪ್ಪಿ ಇಂತಹ ಕರೆಗಳು ಸ್ವೀಕರಿಸಿದರೂ ಕೂಡಲೇ ಕರೆ ಮಾಡಿ, ಇಲ್ಲವಾದಲ್ಲಿ ನಿಮ್ಮ ಫೋನ್ ನಲ್ಲಿರುವ ಮಾಹಿತಿಗಳು ಸೋರಿಕೆಯಾಗುವ ಅಪಾಯಗಳಿವೆ.
ಪುತ್ತೂರು : ನಾನು ಸಿಬಿಐ ಆಫೀಸರ್ ಮಾತನಾಡುತ್ತಿದ್ದೇನೆ. …. ಹೆಸರಿನವನು ನಿಮ್ಮ ಮಗನಾ ? ಅವನ ಚಟುವಟಿಕೆಯ ಬಗ್ಗೆ ನಿಮಗೆ ಅರಿವಿದೆಯಾ ? ಅವನನ್ನು ತಕ್ಷಣ ಬಂಧಿಸಬೇಕಾಗುತ್ತದೆ. ಎಂದೆಲ್ಲಾ ಬೆದರಿಸಿ ಹಣ ಕಬಳಿಸುವ ಜಾಲದ ಕರೆಯೊಂದು ಉಪ್ಪಿನಂಗಡಿ ನಿವಾಸಿಗೆ ಬಂದಿದೆ. ಆದ್ರೆ ಸಮಯಪ್ರಜ್ಞೆಯ ನಡೆಯಿಂದ ಫೋನ್ ಕಾಲ್ ತಗೊಂಡ ವ್ಯಕ್ತಿ ವಂಚನೆಯಿಂದ ಪಾರಾಗಿದ್ದಾರೆ.
ಉಪ್ಪಿನಂಗಡಿಯ ಬ್ಯಾಂಕ್ ರಸ್ತೆಯ ನಿವಾಸಿ ಅಬ್ಬಾಸ್ ಎಂಬವರ ಮೊಬೈಲ್ ಗೆ 92-3471745608 ಸಂಖ್ಯೆಯಿಂದ ಪೋನ್ ಕರೆಯೊಂದು ಬಂದು, ಹಿಂದಿ ಭಾಷೆಯಲ್ಲಿ ತಾನು ಸಿಬಿಐ ಆಫೀಸರ್ ಆಗಿದ್ದು ದೆಹಲಿ ಕಚೇರಿಯಿಂದ ಮಾತಾನಾಡುತ್ತಿದ್ದೇನೆ. ಅಬ್ಬಾಸ್ ರವರ ಪ್ರಥಮ ವರ್ಷದ ಇಂಜಿನಿಯರಿಂಗ್ ಕಲಿಯುತ್ತಿರುವ ಮಗನ ಹೆಸರನ್ನು ಸ್ಪಷ್ಠವಾಗಿ ಉಲ್ಲೇಖಿಸಿ , ಆತ ನಿಮ್ಮ ಮಗನಲ್ಲವೆ ? ಆತ ಏನೆಲ್ಲಾ ಮಾಡುತ್ತಿದ್ದಾನೆ ಎಂಬ ಅರಿವು ನಿಮಗಿದೆಯಾ ? ಅವನನ್ನು ತಕ್ಷಣ ಬಂಧಿಸಬೇಕಾಗುತ್ತದೆ ಎಂದೆಲ್ಲಾ ಬೆದರಿಸಲಾಗುತ್ತದೆ. ಪೋನ್ ಕರೆ ಬಂದ ನಂಬ್ರದಲ್ಲಿ ಪ್ರೊಪೈಲ್ ಪೋಟೋ ಕೂಡಾ ಪೊಲೀಸ್ ಆಫೀಸರ್‌ನಂತಿರುವ ವ್ಯಕ್ತಿಯದಿದ್ದು, ಪೋನ್ ನಂಬ್ರದ ಕೆಳಗಡೆ ಸಿಬಿಐ ಎಂದೂ ದಾಖಲಿಸಲ್ಪಟ್ಟಿರುವುದು ಕಂಡು ಬಂದಿದೆ.
ಆದರೆ ತನ್ನ ಮಗನ ಕಾರ್ಯಚಟುವಟಿಕೆಯ ಬಗ್ಗೆ ಸ್ಪಷ್ಟ ಅರಿವು ಇದ್ದ ಅಬ್ಬಾಸ್ ರವರು , ಪೋನಾಯಿಸಿದ ವ್ಯಕ್ತಿಗೆ ಸಂಬಂಧಿಸಿ ಕೆಲವೊಂದು ಪ್ರಶ್ನೆ ಕೇಳಿದಾಗ ನಿಮಗೆ ನಮ್ಮನ್ನು ಪ್ರಶ್ನಿಸುವ ಹಕ್ಕಿಲ್ಲ . ಏನಿದ್ದರೂ ನಾವು ಕೇಳುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ಎಂದು ಧಿಮಾಕಿನಿಂದ ಹೇಳಲಾಗುತ್ತದೆ. ಮಗನ ನಡವಳಿಕೆಯ ಬಗ್ಗೆ ದೃಢವಾದ ನಂಬಿಕೆ ಹಾಗೂ ಪೋನ್ ಕರೆಯಲ್ಲಿ ಬೆದರಿಕೆಯೊಡ್ಡಿ ಹಣ ಕಬಳಿಸುವ ಜಾಲದ ಅರಿವು ಹೊಂದಿದ್ದ ಅಬ್ಬಾಸ್ ರವರು ತನ್ನ ಮಾತಿನ ಶೈಲಿಯನ್ನು ವಿಧೇಯತೆಯಿಂದ ಆಕ್ರಮಣಕಾರಿಯಾಗಿ ಬದಲಾಯಿಸಿ ತಿಳಿದಿರುವ ಹಿಂದಿ ಭಾಷೆಯಲ್ಲಿ ಮನಸ್ಸಿಗೆ ತೋಚಿದ ಎಲ್ಲಾ ಸ್ತರದ ಬೈಗುಳಗಳನ್ನು ಆಕ್ರೋಶಭರಿತನಾಗಿ ನುಡಿದಾಗ ಪೋನ್ ಕರೆ ಮಾಡಿದಾತ ಮತಿಗೆಟ್ಟು ಕರೆಯನ್ನು ಕಡಿತಗೊಳಿಸಿದ್ದಾನೆ.
ಅಂತರಾಷ್ಟ್ರೀಯ ನೆಲೆಗಟ್ಟಿನಲ್ಲಿ ಮೊಬೈಲ್ ಪೋನ್ ಕರೆಯ ಕೋಡ್ ಸಂಖ್ಯೆ 92 ಎಂದಾಗಿದ್ದು ಅದು ಪಾಕಿಸ್ತಾನದಲ್ಲಿ ಬಳಕೆಯಾಗುವ ಪೋನ್ ಆಗಿರುತ್ತದೆ. ಅಲ್ಲಿನ ವ್ಯಕ್ತಿಗೆ ಉಪ್ಪಿನಂಗಡಿಯ ನಿವಾಸಿಯಾಗಿರುವ ಅಬ್ಬಾಸ್ ರವರ ಮೊಬೈಲ್ ಸಂಖ್ಯೆ ಹಾಗೂ ಅವರ ಮಗನ ಹೆಸರು ಸ್ಪಷ್ಠವಾಗಿ ತಿಳಿದಿರಬೇಕಾದರೆ ಈ ಜಾಲದಲ್ಲಿ ಸ್ಥಳೀಯರ ಕೈವಾಡದ ಬಗ್ಗೆಸಂಶಯಿಸಲಾಗಿದೆ.
ಪೊಲೀಸ್ ಅಧಿಕಾರಿ, ಇನ್‌ಕಾಂ ಟ್ಯಾಕ್ಸ್, ಸಿಬಿಐ ಆಫೀಸರ್, ಕ್ರೈಂ ಬ್ರಾಂಚ್, ಸಿಮ್ ಕಾರ್ಡ್, ಹೀಗೇ ಅನೇಕರ ಹೆಸರು , ID card ಬಳಸಿ ಫೋನ್ ಕರೆಗಳು, ಬೇನಾಮಿ ಹುಡುಗಿಯ ಫೋಟೊ ಬಳಸಿ ವಿಡಿಯೋ ಕರೆಗಳು ಬರುತ್ತಿದ್ದು ಸಾರ್ವಜನಿಕರು ಎಚ್ಚರದಿಂದ ಇರಬೇಕಾಗಿದೆ. ತಪ್ಪಿ ಇಂತಹ ಕರೆಗಳು ಸ್ವೀಕರಿಸಿದರೂ ಕೂಡಲೇ ಕರೆ ಮಾಡಿ, ಇಲ್ಲವಾದಲ್ಲಿ ನಿಮ್ಮ ಫೋನ್ ನಲ್ಲಿರುವ ಮಾಹಿತಿಗಳು ಸೋರಿಕೆಯಾಗುವ ಅಪಾಯಗಳಿವೆ.
also Read..
ಮಂಗಳೂರು -ಡಿಜಿಟಲ್ ಅರೆಸ್ಟ್ ನಲ್ಲಿ 39 ಲಕ್ಷ ವಸೂಲಿ ಮಾಡಿದ ನಕಲಿ ಅಧಿಕಾರಿಗಳು