FILM
ಇನ್ಸ್ಟಾಗ್ರಾಮ್ ಲೈವ್‌ಗೆ ಹೋದ ಪತ್ನಿಗೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ
ಬೆಂಗಳೂರು ಸೆಪ್ಟೆಂಬರ್ 30: ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ಸಮೀರ್ ಆಚಾರ್ಯ ದಂಪತಿಯ ನಡುವೆ ಇದೀಗ ಗಲಾಟೆ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಕನ್ನಡ ಕಿರುತೆರೆಯಲ್ಲಷ್ಟೇ ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿರುವ ಜೋಡಿ, ಆದರ್ಶ ದಂಪತಿಯ ರೀತಿ ಬಿಂಬಿಸುತ್ತಿದ್ದರು. ಆದರೆ ಇದೀಗ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ಸಮೀರ್ ಆಚಾರ್ಯ ದಂಪತಿ ಜೀವನದಲ್ಲಿ ಅಪಸ್ವರ ಎದ್ದಿದೆ. ಪತ್ನಿ ಶ್ರಾವಣಿ ಸಮೀರ್ ಆಚಾರ್ಯ ಮೇಲೆ ಸಮೀರ್ ಆಚಾರ್ಯ ತಂದೆ-ತಾಯಿಯ ಜೊತೆಗೂಡಿ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಾಹಿತಿ ಪ್ರಕಾರ ಸಮೀರ್ ಆಚಾರ್ಯ ಅವರ ಮಗಳನ್ನು ಶ್ರಾವಣಿ ಬೆದರಿಸಿದ್ದ ಕಾರಣಕ್ಕೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಮನೆಯಲ್ಲಿ ಆರಂಭವಾಗಿದ್ದ ಈ ಜಗಳ ವಿಕೋಪಕ್ಕೆ ತಿರುಗಿದೆ. ಸಮೀರ್ ಅವರು ಅತ್ತೆ, ಮಾವ ಸೇರಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಶ್ರಾವಣಿ ಅವರು ಇನ್ಸ್ಟಾಗ್ರಾಮ್ನಲ್ಲಿ ಲೈವ್ ಮಾಡಲು ಹೋಗಿದ್ದಾರೆ. ಲೈವ್ ವಿಡಿಯೋ ಮಾಡುವಾಗ ಸಮೀರ್ ಆಚಾರ್ಯ ಅವರು ಪತ್ನಿ ಶ್ರಾವಣಿ ಅವರ ಫೋನ್ ಒಡೆದು ಹಾಕಿ, ಕೈ – ಮುಖಕ್ಕೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಈ ಗಲಾಟೆಯಲ್ಲಿ ಸಮೀರ್ ತಂದೆ ರಾಘವೇಂದ್ರ ಅವರ ತಲೆಗೂ ಗಾಯಗಳಾಗಿದೆ.
ಸಮೀರ್ ಆಚಾರ್ಯ ಕುಟುಂಬದ ವಿರುದ್ಧ ಶ್ರಾವಣಿ ಅವರು ನ್ಯಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದರು. ಆಗ ಸೊಸೆ ವಿರುದ್ಧ ದೂರು ನೀಡಲು ಸಮೀರ್ ಅವರ ಫೋಷಕರು ಮುಂದಾಗಿದ್ದಾರೆ.
ಈ ವೇಳೆ ಮಹಿಳಾ ಠಾಣೆ ಅಧಿಕಾರಿಗಳು ಕೌನ್ಸ್‌ಲಿಂಗ್ ಮೂಲಕ ದಂಪತಿಯನ್ನ ಒಂದು ಮಾಡಿದ್ದಾರೆ. ಕೊಟ್ಟ ಕಂಪ್ಲೇಂಟ್ ವಾಪಸ್ ಪಡೆದು ಮತ್ತೊಮ್ಮೆ ಹೀಗೆ ಮಾಡದಂತೆ ಅರ್ಜಿ ಬರೆದುಕೊಟ್ಟು ವಾಪಸ್ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.
You must be logged in to post a comment Login