Connect with us

    LATEST NEWS

    ಮಂಗಳೂರು -ಡಿಜಿಟಲ್ ಅರೆಸ್ಟ್ ನಲ್ಲಿ 39 ಲಕ್ಷ ವಸೂಲಿ ಮಾಡಿದ ನಕಲಿ ಅಧಿಕಾರಿಗಳು

    ಮಂಗಳೂರು ಅಕ್ಟೋಬರ್ 01: ಕರಾವಳಿಯಲ್ಲಿ ಇದೀಗ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಸೈಬರ್ ಕ್ರೈ ಪ್ರಕರಣಗಳ ಏರಿಕೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಪಾರ್ಸೇಲ್ ನಲ ್ಲಿ ಡ್ರಗ್ಸ್ ಇದೆ ಎಂದು ಹೇಳಿ ವ್ಯಕ್ತಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ ಅವರಿಂದ ₹ 39.30 ಲಕ್ಷ ವಂಚಿಸಿದ ಕುರಿತು ನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ದೂರಿನ ಪ್ರಕಾರ ಸೆಪ್ಟೆಂಬರ 23 ರಂದು ನನ್ನ ಮೊಬೈಲ್‌ಗೆ ಕರೆ ಬಂದಿತ್ತು. ಡಿಎಚ್‌ಎಲ್ ಕೋರಿಯರ್‌ ಸಂಸ್ಥೆಯ ಕಚೇರಿಯಿಂದ ಶ್ರೇಯಾ ಶರ್ಮಾ ಮಾತನಾಡುತ್ತಿದ್ದೇನೆ ಎಂದು ಕರೆ ಮಾಡಿದವರು ತಿಳಿಸಿದ್ದರು. ‘ನಿಮ್ಮ ಹೆಸರಿನಲ್ಲಿ ಚೀನಾಕ್ಕೆ ಕಳುಹಿಸಿದ್ದ ಪಾರ್ಸೆಲ್‌ ರವಾನೆಯಾಗದೇ ಕಚೇರಿಯಲ್ಲೇ ಉಳಿದಿದೆ. ಅದರಲ್ಲಿ 5 ಪಾಸ್ಪೋರ್ಟ್‌, ಒಂದು ಲ್ಯಾಪ್‌ಟಾಪ್‌, 400 ಗ್ರಾಂ ಎಂಡಿಎಂಎ ಹಾಗೂ ಕೆಲವು ಬ್ಯಾಂಕ್‌ ದಾಖಲೆಗಳು ಹಾಗೂ ಮೂರೂವರೆ ಕೆ.ಜಿ. ಬಟ್ಟೆ ಉಳಿದುಕೊಂಡಿದೆ’ ಎಂದು ಆ ವ್ಯಕ್ತಿ ತಿಳಿಸಿದ್ದರು. ಆ ಪಾರ್ಸೆಲ್ ನನ್ನದಲ್ಲ ಎಂದರೂ ಕೇಳಲಿಲ್ಲ. ‘ಕಸ್ಟಮ್ಸ್ ಅಧಿಕಾರಿಗಳು ನಿಮ್ಮನ್ನು ಬಂಧಿಸುತ್ತಾರೆ ಎಂದು ಹೇಳಿದ್ದರು’ ಎಂದು ದೂರು ನೀಡಿದ ವ್ಯಕ್ತಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.


    ‘24ರಂದು ಬೆಳಿಗ್ಗೆ 9ರಿಂದ ವಿಡಿಯೋ ಕಾಲ್‌ ಮೂಲಕ ವಿಚಾರಣೆ ಒಳಪಡಿಸುತ್ತೇವೆ ಎಂದು ಹೇಳಿ, ನಾನು ಯಾರ ಜೊತೆಗೂ ಮಾತನಾಡದಂತೆ (ಡಿಜಿಟಲ್ ಅರೆಸ್ಟ್‌) ನಿರ್ಬಂಧಿಸಿದರು. ನಿಷೇಧಿತ ಎಂಡಿಎಂಎ ಸಾಗಾಟ ಪ್ರಕರಣದಲ್ಲಿ ಬಂಧಿಸದೇ ಇರಬೇಕಾದರೆ ಹಣ ನೀಡುವಂತೆ ಬೇಡಿಕೆ ಇಟ್ಟರು. ನಾನು ಮೊದಲು ₹ 37 ಲಕ್ಷ ಪಾವತಿಸಿದೆ. ಮರುದಿನ ನನ್ನ ಸೊತ್ತುಗಳ ವಿಚಾರಣೆಯನ್ನು ಆಡಿಟರ್‌ ಒಬ್ಬರು ನಡೆಸುತ್ತಾರೆ ಎಂದು ನಂಬಿಸಿ ಅದಕ್ಕೂ ₹ 2.30 ಲಕ್ಷವನ್ನು ಪಡೆದರು. ವಿಚಾರಣೆ ಪೂರ್ಣಗೊಂಡ ಬಳಿಕ ಪಡೆದ ಅಷ್ಟೂ ಹಣವನ್ನು ಸೆ 28 ರಂದು ಮರಳಿಸುವುದಾಗಿ ಭರವಸೆ ನೀಡಿದ್ದರು. ನಂತರ ನಾನು ಕರೆ ಮಾಡಿದರೂ ಸ್ವೀಕರಿಸಿಲ್ಲ’ ಎಂದು ದೂರುದಾರ ಆರೋಪಿಸಿದ್ದಾರೆ‘ ಎಂದರು.

    also Read..

    ಪುತ್ತೂರು : ಇಂತಹ ಕರೆಗಳು ನಿಮಗೂ ಬರಬಹುದು, ಮೋಸ ಹೋಗದೆ ಜಾಗೃತೆಯಿಂದಿರಿ..!!

    Share Information
    Advertisement
    Click to comment

    You must be logged in to post a comment Login

    Leave a Reply