DAKSHINA KANNADA
ಪುತ್ತೂರು – ಹಿರಿಯ ನಾಗರಿಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ – ಚೂರಿ ಇರಿತ

ಪುತ್ತೂರು ಜೂನ್ 13: ಇಬ್ಬರು ಹಿರಿಯ ನಾಗರಿಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಓರ್ವರಿಗೆ ಚೂರಿ ಇರದ ಘಟನೆ ಪುತ್ತೂರು ಕೋರ್ಟ್ ರಸ್ತೆಯ ದೈಯ್ಯರ ಅಂಗಡಿಯ ಬಳಿ ನಡೆದಿದೆ.

ಗುಣಕರ ಶೆಟ್ಟಿ ಮತ್ತು ಸದಾಶಿವ ಪೈ ನಡುವೆ ಗಲಾಟೆ ನಡೆದಿದ್ದು, ನಗರದ ದರ್ಬೆ ನಿವಾಸಿ ಸದಾಶಿವ ಪೈ ಚೂರಿ ಇರಿತಕ್ಕೊಳಗಾಗಿದ್ದಾರೆ. ಚೂರಿ ಇರಿತದಿಂದ ಗಾಯಗೊಂಡ ಸದಾಶಿವ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಹನ ಪಾರ್ಕಿಂಗ್ ವಿಚಾರದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.
Continue Reading