LATEST NEWS
ಮರವೂರು ಹಳೆ ಸೇತುವೆ ಮೇಲೆ ಸಂಚಾರ ನಿರ್ಬಂಧ
ಮಂಗಳೂರು,ಜೂನ್ 13 : ಮರವೂರು ಹಳೆ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
– ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ 67 ರಸ್ತೆಯು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಇಲ್ಲಿಗೆ ಸಂಪರ್ಕಿಸುವ ರಸ್ತೆಯಲ್ಲಿ ಹಲವಾರು ಘನವಾಹನಗಳು ಲಘುವಾಹನಗಳು ಹಳೇ ಸೇತುವೆ ಮೂಲಕ ಚಲಿಸುತ್ತಿರುವುದರಿಂದ ಸದ್ರಿ ಸೇತುವೆಯ ಎರಡನೇ ಪಿಯರ್ ನ ತಳಪಾಯವನ್ನು ಭದ್ರಪಡಿಸಿ ಸಂಪೂರ್ಣ ಸೇತುವೆ ದುರಸ್ತಿ ಪಡಿಸುವವರೆಗೆ ಮರವೂರು ಹಳೆಸೇತುವೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ ಹಳೆ ಸೇತುವೆಯಲ್ಲಿ ಸಂಚರಿಸುವ ವಾಹನಗಳು ಹೊಸ ಸೇತುವೆಯಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಮುಲ್ಲೈ ಮುಗಿಲನ್ ಎಂ.ಪಿ ಅವರು ಆದೇಶ ಹೊರಡಿಸಿದ್ದಾರೆ.
You must be logged in to post a comment Login